ಜ್ಯೋತಿ ಬೆಳಗುವ ವೇಳೆ ಸಿಎಂ ಸಿದ್ದರಾಮಯ್ಯಗೆ ತಗುಲಿದ ಬೆಂಕಿ

0
16

ಬೆಂಗಳೂರು: ಕಿತ್ತೂರು ಉತ್ಸವ– ವಿಜಯ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಜ್ಯೋತಿ ಬೆಳಗುವ ವೇಳೆ ಸಿಎಂ ಸಿದ್ದರಾಮಯ್ಯ ಅವರ ಬಟ್ಟೆಗೆ ಬೆಂಕಿಯ ಬಿಸಿ ತಾಗಿದ ಘಟನೆ ನಡೆಯಿತು.
ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡಿದ ಬಳಿಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಜಾಗ ಬಿಡಲು ಸಿಎಂ ಮುಂದಾದರು.ಈ ವೇಳೆ ಸಿಎಂ ದೀಪದ ಹತ್ತಿರ ಬಂದಾಗ ಎಡಕೈಗೆ ಬೆಂಕಿಯ ಕಿಡಿ ತಾಗಿದೆ. ಬಟ್ಟೆಗೆ ಆಕಸ್ಮಿಕವಾಗಿ ತಾಕಿದ ಕಿಡಿಯನ್ನು ಕೂಡಲೇ ಭದ್ರತಾ ಸಿಬ್ಬಂದಿ ಆರಿಸಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕೂಡ ವೈರಲ್‌ ಆಗಿವೆ.

Previous articleಹೆಲಿಕಾಪ್ಟರ್ ಪತನ: ಪೈಲಟ್ ಸೇರಿ ಮೂವರು ಸಾವು
Next articleಫಲಿತಾಂಶಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿ ನಿಧನ