ಪತ್ನಿ ಬರೆದ ಪತ್ರವೇ ಸಿಎಂಗೆ ಗೊತ್ತಿಲ್ವಂತೆ…

0
16

ಧಾರವಾಡ: ನೀನು ಅತ್ತಂಗೆ ಮಾಡು ನಾನು ಸತ್ತಂಗೆ ಮಾಡ್ತೀನಿ ಅನ್ನೋತರ ಆಯ್ತು..! ತಮ್ಮ ಪತ್ನಿ ಬರೆದ ಪತ್ರ, ಸಿದ್ದರಾಮಯ್ಯನವರಿಗೇ ಗೊತ್ತಿರಲಿಲ್ಲವಂತೆ ಎನ್ನುವುದು ಹಾಸ್ಯಾಸ್ಪದ ಸಂಗತಿ ಎಂದಿದ್ದಾರೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಾರ್ವತಿ ಸಿದ್ದರಾಮಯ್ಯನವರ ಪತ್ರ ಬಹುಶಃ ಸಿದ್ದರಾಮಯ್ಯನವರ ತಪ್ಪೊಪ್ಪಿಗೆಯ ಪತ್ರ ಹಾಗೂ ಮುಡಾ ಹಗರಣದ ಒಂದು ಸ್ಪಷ್ಟತೆ ಎಂಬಂತಿದೆ ಎಂದಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ, ತಪ್ಪೇ ಮಾಡದವರು ಪತ್ನಿಯ ನಿರ್ಧಾರ ತಿರಸ್ಕರಿಸಿ ಕಾನೂನು ಹೋರಾಟ ಮಾಡಬೇಕಿತ್ತು. ಆದರೆ, ಕಳ್ಳ ತಾನು ಕದ್ದ ಮಾಲನ್ನು ವಾಪಸ್ಸು ಮಾಡಿದರೆ ನಿರಪರಾಧಿ ಆಗಿಬಿಡುವನೇ…? ಅಕ್ರಮವಾಗಿ ಪಡೆದಿದ್ದ ೧೪ ನಿವೇಶನಗಳನ್ನು ವಾಪಸ್ಸು ಮಾಡುವ ಉದಾರತನ ತೋರಿಸುತ್ತಿರುವ ನಿಮಗೆ, ಇದು ಸರ್ಕಾರದ ಆಸ್ತಿ, ಇಂದಲ್ಲ ನಾಳೆ ಕೋರ್ಟ್ ಆದೇಶದ ಮೇಲೆ ಅದನ್ನು ಹಿಂದಿರುಗಿಸಲೇಬೇಕು ಎಂಬುದು ತಿಳಿದಿರಬೇಕಲ್ಲವೇ ಎಂದಿದ್ದಾರೆ.
ನೀವು ಹೇಗೆ ಸೈಟು ವಾಪಾಸ್ ನೀಡಿದ್ದೀರೋ ಅದೇ ಮಾದರಿಯಲ್ಲಿ ರಾಜೀನಾಮೆ ನೀಡುವ ಪರಿಸ್ಥಿತಿ ಕೂಡಾ ನಿರ್ಮಾಣವಾಗಲಿದೆ. ತನಿಖೆಯನ್ನು ಎದುರಿಸಿ ನೀವು ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲದು ಎಂದಿದ್ದಾರೆ.

Previous articleಕಿಶೋರ್ ಕುಮಾರ್ ಗೆಲುವು ನಿಶ್ಚಿತ: ನಳಿನ್‌ಕುಮಾರ್ ಕಟೀಲ್ ವಿಶ್ವಾಸ
Next articleಆತ್ಮಸಾಕ್ಷಿಯಾಗಿ ಕೆಲಸ ಮಾಡುತ್ತೇನೆ; ರಾಜೀನಾಮೆ ನೀಡುವುದಿಲ್ಲ