ಇಳಕಲ್ : ಇಲ್ಲಿನ ನವಜೀವನ ವೃದ್ದಾಶ್ರಮದಲ್ಲಿ ಅಕ್ಟೋಬರ್ ಒಂದರಂದು ವಿಶ್ವ ಹಿರಿಯರ ದಿನವಾಗಿ ಹಿರಿಯರು ಮತ್ತು ಆಶ್ರಮವಾಸಿಗಳು ಆಡಿ ಹಾಡಿ ಕುಣಿದು ಕುಪ್ಪಳಿಸಿದರು.
ನಗರಸಭೆ ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ಈ ಆಶ್ರಮವಾಸಿಗಳ ಜೊತೆಗೆ ಸೇರಿಕೊಂಡು ಆಡಿದರು ಹಾಡಿದರು ನೃತ್ಯವನ್ನು ಸಹ ಮಾಡಿ ರಂಜಿಸಿದರು, ಕಾರ್ಯಕ್ರಮವನ್ನು ಕಾಳಮ್ಮ ಜಕ್ಕಾ ಉದ್ಘಾಟಿಸಿದರು ,ಅತಿಥಿಗಳಾಗಿ ಸುಲೇಮಾನ ಚೋಪದಾರ ಮಹಾಂತೇಶ ಗೊರಜಿನಾಳ ಸವಿತಾ ಹಿರೇಮಠ ಅಂಬಿಕಾ ಚವ್ಹಾಣ ಸಲೀಂ ಮುದಗಲ್ ಆಗಮಿಸಿ ಹಿರಿಯರ ದಿನವನ್ನು ನೆನಪಿಡುವಂತೆ ಮಾಡಿದರು