ಎಲ್‌ಪಿಜಿ ಸಿಲಿಂಡರ್‌ ದರ ಹೆಚ್ಚಳ

ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 48.50 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.
ಅಕ್ಟೋಬರ್‌ ತಿಂಗಳ ಮೊದಲ ದಿನವೇ ಭರ್ಜರಿ ಶಾಕ್ ನೀಡಿದ್ದು, ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳಿಗೆ ಜನರಿಗೆ ಶಾಕ್ ತಟ್ಟಿದೆ. ಕಳೆದ 3 ತಿಂಗಳಿನಂತೆ ಈ ಬಾರಿಯೂ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಉಂಟಾಗಿದ್ದು, ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿ ನವರಾತ್ರಿ ಹೊತ್ತಲ್ಲಿ ಗ್ರಾಹಕರಿಗೆ ಶಾಕ್ ನೀಡಿದೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 48.50 ರೂಪಾಯಿ ಹೆಚ್ಚಿಸಲಾಗಿದೆ.