ಬಾಗಲಕೋಟೆ: ಮುಳ್ಳುಹಂದಿ ಬೇಟೆಯಾಡಿ ಯುವಕರಿಬ್ಬರು ತಮ್ಮ ಸ್ಟೇಟಸ್ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.
ಮುಧೋಳ, ಬೀಳಗಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳ ದಿವ್ಯನಿರ್ಲಕ್ಷ್ಯಕ್ಕೆ ಇದು ತಾಜಾ ಉದಾಹರಣೆ ಆಗಿದ್ದು, ಈ ಭಾಗದಲ್ಲಿ ಕಾಡುಪ್ರಾಣಿಗಳ ಬೇಟೆ ನಿರಂತರವಾಗಿ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ.
ಮುಧೋಳ ತಾಲೂಕಿನ ಅರಳಿಕಟ್ಟಿ ಹಾಗೂ ಬುದ್ನಿ ಗ್ರಾಮದ ಯುವಕರಾದ ಶ್ರೀಶೈಲ್ ಹಾಗೂ ಬಸವರಾಜ್ ಎಂಬುವರು ಕಾಡು ಹಂದಿ ಬೇಟೆಯಾಡಿದಲ್ಲದೇ ಅಡ್ಡ ಬಂದರೆ ಕಡ್ಯಾಕೂ ಸೈ ಎಂದು ಹಿರೋಯಿಸಂ ತೋರಿಸಿರುವ ಪೋಸ್ಟ್ ಹಾಕಿದ್ದಾರೆ. ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ