ನಟ ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ನವದೆಹಲಿ: ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿಗೆ ದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಘೋಷಣೆ ಮಾಡಿದ್ದಾರೆ. ‘ಮಿಥುನ್ ಅವರು ಸಿನಿಮಾ ಪಯಣ ನಿಜಕ್ಕೂ ಹಲವು ತಲೆಮಾರಿಗಳಿಗೆ ಸ್ಫೂರ್ತಿ. ದಾದಾಸಾಹೇಬ್ ಫಾಲ್ಕೆ ಆಯ್ಕೆ ಸಮಿತಿ ಮಿಥುನ್ ಚಕ್ರವರ್ತಿಗೆ ಈ ಅವಾರ್ಡ್ ನೀಡಲು ನಿರ್ಧರಿಸಿದೆ. ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಆಧರಿಸಿ ಈ ಅವಾರ್ಡ್ ನೀಡಲಾಗುತ್ತಿದೆ’ ಇದೇ ಅಕ್ಟೋಬರ್ 8, 2024 ರಂದು 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಸ್ತುತಪಡಿಸಲಾಗುವುದು ಎಂದಿದ್ದಾರೆ.