ಮರ್ಯಾದೆ ಇದ್ದರೆ ಒಂದು ಸಿಂಪಲ್ ಸಹಿ ಮಾಡದೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು

0
20

ಹುಬ್ಬಳ್ಳಿ: ದಸರಾ ಉದ್ಘಾಟನೆ ವಿಚಾರ ಬಿಡಿ; ಮರ್ಯಾದೆ ಇದ್ರೆ ಒಂದು ಸಿಂಪಲ್ ಸಹಿ ಕೂಡಾ ಸಿದ್ದರಾಮಯ್ಯ ಮಾಡದೇ ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಚರ್ಮ ದಪ್ಪವಾಗಿದೆ. ಹೀಗಾಗಿ ರಾಜೀನಾಮೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಬೇಲ್ ಮೇಲೆ ಇದ್ದಾರೆ. ಆಂತರಿಕ ಚರ್ಚೆ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯನವರೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವಾದ್ರಾ ಅವರ ಹೆಸರು ಪ್ರಸ್ತಾಪಿಸಿ ನಿಮ್ಮ ಮೇಲೂ ಕೇಸಾ ಆಗಿದೆ. ನೀವೂ ಬೇಲ್ ಮೇಲೆ ಇದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಜೋಶಿ ಹೇಳಿದರು.
ಮುಡಾದಿಂದ ಅಕ್ರಮ ಸೈಟ್ ಪಡೆದ ಬಗ್ಗೆ ದೂರು ನೀಡಿದ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಸಿದ್ಧರಾಮಯ್ಯನವರು ದೂರು ನೀಡುವ ಪ್ರಯತ್ನ ನಡೆಸಿದ್ದಾರಂತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಇದು ಸಿದ್ಧರಾಮಯ್ಯನವರ ಬ್ಲ್ಯಾಕ್ ಮೇಲ್ ತಂತ್ರ. ಇದನ್ನೇ ಅವರು ಮಾಡಿಕೊಂಡು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Previous articleಎಚ್‌ಡಿಕೆ ಬಗ್ಗೆ ಹಂದಿ ಪದ ಬಳಸಿದ ಲೋಕಾಯುಕ್ತ ಎಡಿಜಿಪಿ ವಿರುದ್ಧ ಪ್ರಲ್ಹಾದ ಜೋಶಿ ಗರಂ
Next articleಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ