ಕೊಪ್ಪಳ: ತುಂಗಭದ್ರಾ ಜಲಾಶಯವು ಭರ್ತಿಯಾಗಿದ್ದು, ಮಳೆರಾಯನಿಗೆ ಧನ್ಯವಾದ ತಿಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಗಿಣಿಗೇರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಂಗಾರು ಬೆಳೆ ನೀರು ಸಿಗಲಿದ್ದು, ಹಿಂಗಾರಿಗೂ ನೀರು ಸಿಗಲಿದೆ. ಗೇಟ್ ಅಳಡಿಸಿದ ಮೇಲೆ ಜಾಗೃತವಾಯಿತು. ತಜ್ಞ ಕಣ್ಣಯ್ಯ ನಾಯ್ಡು ಸಹಕಾರದಿಂದ ಜಿಂದಾಲ್ ಕಂಪನಿ, ಹಿಂದೂಸ್ಥಾನ ಸ್ಟೀಲ್ಸ್, ನಾರಾಯಣ ಇಂಜಿನಿಯರಿಂಗ್ ಸಂಸ್ಥೆ ಹಾಗೂ ಅಧಿಕಾರಿಗಳ ಕೆಲಸದಿಂದಾಗಿ ಗೇಟ್ ಅಳವಡಿಕೆ ಯಶಸ್ವಿಯಾಯಿತು. ಇದರಿಂದಾಗಿ ೨೦ ಟಿಎಂಸಿ ನೀರು ಉಳಿಯಿತು. ರೈತರು ನೀರು ಸಿಗತ್ತದೆಯೋ, ಇಲ್ಲವೋ ಎಂಬ ಆತಂಕದಲ್ಲಿದ್ದರು. ಆದರೆ ರೈತರಿಗೆ ಯಾವುದೇ ತೊಂದರೆ ಆಗಿಲಿಲ್ಲ. ೨ನೇ ಬೆಳೆ ಹಿಂಗಾರಿಗೂ ನೀರು ಕೊಡಲು ಪ್ರಯತ್ನ ಮಾಡುತ್ತೇವೆ. ಇದು ಸಾಧ್ಯ ಆಗಬಹುದು ಎಂದರು.
೧೯೫೩ರಲ್ಲಿ ತುಂಗಭದ್ರಾ ಜಲಾಶಯವು ನಿರ್ಮಾಣವಾಗಿದೆ. ೭೦ ವರ್ಷದ ಜಲಾಶಯ ಇದಾಗಿದೆ. ೫೦ ವರ್ಷಕ್ಕೆ ಬದಲಾಯಿಸಬೇಕು ಎಂದಿದೆ. ೧೯ನೇ ಗೇಟ್ ಕೊಚ್ಚಿ ಹೋಗಿತ್ತು. ಇದರ ತನಿಖೆಯಾಗಿ ತಂಡ ರಚನೆ ಮಾಡಿದ್ದು, ಈ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಬೇರೆ ರಾಜ್ಯಗಳಿಗಿಂತ ಹಾಲಿನ ದರ ಕಡಿಮೆ ಇದೆ. ರೈತರಿಗೂ ಹಾಲಿನ ದರ ಹೆಚ್ಚಿಸಬೇಕು ಎಂದು ಒತ್ತಾಯ ಇದೆ. ಮುಂದಿನ ದಿನಗಳಲ್ಲಿ ಹಾಲಿನ ದರ ಹೆಚ್ಚಿಸಿದ್ದಷ್ಟೇ ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಿಸಲಾಗುತ್ತದೆ. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ, ತೀರ್ಮಾನಿಸಲಾಗುತ್ತದೆ ಎಂದರು.
ಹರ್ಕಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಗೆ ರಾಜ್ಯಪಾಲರು ನೋಟಿಸ್ ನೋಟಿಸ್ ನೀಡುತ್ತಿದ್ದಾರೆ. ಅಲ್ಲಿನ ವಿಷಯಗಳು ರಾಜ್ಯಪಾಲರ ಕಚೇರಿಯಿಂದ ಸೋರಿಕೆ ಆಗುತ್ತಿದೆ. ಅವರ ಮೇಲೆಯೇ ತನಿಖೆ ಆಗಬೇಕು ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ, ವಸತಿ ಸಚಿವ ಜಮೀರ್ ಅಹ್ಮದ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಇದ್ದರು.
ದ್ವೇಷ ರಾಜಕಾರಣ ಮಾಡಲ್ಲ: ಸಿದ್ದು ಸ್ಪಷ್ಟನೆ
ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ವಿಚಾರವಾಗಿ ಪ್ರತಿಕ್ರಿಯಿಸಿ, ಧ್ವೇಷದ ರಾಜಕಾರಣ ಮಾಡಲ್ಲ. ಅಪರಾಧ ಮಾಡು ಎಂದು ನಾವೆಲ್ಲಿ ಹೇಳಿದ್ದೇವೆ?. ಶಾಸಕರು ಎಸ್ಐಟಿ ಮಾಡಿ ಎಂದರು. ೪ ಪ್ರಕರಣಗಳು ಅವರ ಮೇಲಿದೆ. ಎಫ್ಐಆರ್ ಆಗಿದೆ. ಯಾರಿಗೂ ಕೂಡಾ ಒತ್ತಡ ಹಾಕಲ್ಲ ಎಂದರು.


























