ಪ್ರಮೋದ್ ಮುತಾಲಿಕ್ ಕ್ಷಮೇ ಕೇಳುವ ಪ್ರಶ್ನೆಯೇ ಇಲ್ಲ

0
61

ಹುಬ್ಬಳ್ಳಿ: ಮಂಟೂರ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ಮಾತು ಕೇಳುವ ಅವಶ್ಯಕತೆಯಿಲ್ಲ. ಅಲ್ಲಿನ ಜನರ ಅಭಿಪ್ರಾಯ ಆಧರಿಸಿ ಮುಂದುವರೆಯಲಾಗುವುದು. ಜನರು ಬೇಡ ಎಂದರೆ ಬೇರೆ ಕಡೆಗೆ ಸ್ಥಳಾಂತರ ಮಾಡುತ್ತೇವೆ. ಅಲ್ಲಿಯೇ ಇರಲಿ ಎಂದರೆ ಅಲ್ಲಿಯೇ ಮುಂದುವರೆಸುತ್ತೇವೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಶ್ರೀರಾಮ ಸೇನೆಗೆ ತಿರುಗೇಟು ನೀಡಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ ಅವರು, ಅವನು‌ ಕೂಡಾ ನನಗೆ ಅಬ್ದುಲ್ ನೋ? ಅಬ್ಬಯ್ಯ ನೋ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ. ಮೊದಲು ಅವರು ಕ್ಷಮೆ ಯಾಚನೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

ಹತ್ಯೆಯಾದ ಅಂಜಲಿ ಕುಟುಂಬಕ್ಕೆ ಸರ್ಕಾರ ಹಾಗೂ ವೈಯಕ್ತಿಕವಾಗಿ ಆ ಕುಟುಂಬಕ್ಕೆ ಯಾವ ರೀತಿಯ ಪರಿಹಾರ ಕ್ರಮವನ್ನು ಮಾಡಬೇಕು ಅವೆಲ್ಲವನ್ನೂ ಮಾಡಿದ್ದೇನೆ. ಇವರನ್ನು ಕೇಳಬೇಕಿಲ್ಲ ಎಂದು ಶಾಸಕರು ಹರಿಹಾಯ್ದರು.

ವಿರೋಧಿಗಳು ನನ್ನ ವಿರುದ್ಧ ಬೋಗಸ್ ವಿಚಾರಗಳನ್ನು ಹೇಳಿ, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕರು ಹರಿಹಾಯ್ದರು.

Previous articleಭಾರತ ಮೊದಲ ಇನ್ನಿಂಗ್ಸ್‌: 376 ರನ್‌ಗಳಿಗೆ ಆಲೌಟ್‌
Next articleಶಾಸಕ ಮುನಿರತ್ನ ಅವರನ್ನು ಪಕ್ಷ ಹೊರಹಾಕಲಿ