ರಬಕವಿ-ಬನಹಟ್ಟಿ: ರಬಕವಿ ನಗರದ ತಿಪ್ಪಯ್ಯ ಗಿರಿಮಲ್ಲಯ್ಯ ಪೂಜಾರಿ (೫೩) ರಬಕವಿ ತೇರಿನ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ.
ರಬಕವಿ ಶಂಕರಲಿಂಗ ಟ್ರಸ್ಟ್‌ನ ಮಹಾದೇವ ದೇವಸ್ಥಾನ ಅಡವಿಯಲ್ಲಿನ ಮಹಾದೇವ ದೇವಸ್ಥಾನದ ಸುಪರ್ದಿಯಲ್ಲಿರುವ ರಥದ ಮನೆಯಲ್ಲಿ ರಬಕವಿ ಜಾತ್ರೆಯ ನಂತರ ರಥದ ಮೇಲೆ ಅರಿವೆ ಹೊರಿಸುವ ಸಮಯದಲ್ಲಿ ಮೇಲಿನಿಂದ ಈತ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಈ ಕುರಿತು ತೇರದಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.