ರಾಯಚೂರು:ಹಳೆ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳ ಮಧ್ಯ ಘರ್ಷಣೆ:ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ
ತಾಲೂಕಿನ ಮಿರ್ಜಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಭೀಮೇಶ್ ನಾಯಕ್ (38) ಮೃತಪಟ್ಟಿದ್ದು, ರಾಮಲಮ್ಮ, ಅಲಾರಿ ನಾಯಕ್, ದೂಳಯ್ಯ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಕಟ್ಟಿಗೆ, ಕುಡುಗೋಲು, ಭರ್ಜಿಗಳಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದು ಗುಂಪಿನಲ್ಲಿ ಯರ್ರಣ್ಣ, ದೊಳ್ಳಯ್ಯ, ದೇವಪ್ಪ, ಮಾದಗಾನು, ಗೊರಿಯಾನು, ವಿರೇಶ್, ತಾಯಪ್ಪ, ಕೃಷ್ಣಗಾರು ಎಂಬುದರಿಂದ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಘರ್ಷಣೆಯಿಂದಾಗಿ
ವೃದ್ದರು ಸೇರಿದಂತೆ ಬಹುತೇಕರಿಗೆ ಗಾಯಗ ಳಾಗಿವೆ. ಗಾಯಗೊಂಡವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಇಡಪನೂರು ಪೋಲಿಸರು ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದಾರೆ. ಈ ಕುರಿತು ಇಡಪನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.