ನಟಿ ಚಿರಶ್ರೀ ಅಂಚನ್ ನಿಶ್ಚಿತಾರ್ಥ ಫೆ. 3ರಂದು ಮುಂಬೈ ಉದ್ಯಮಿ ಜತೆ ವಿವಾಹ

0
14

ಮುಲ್ಕಿ: ಸ್ಯಾಂಡಲ್‌ವುಡ್, ಕೋಸ್ಟಲ್‌ವುಡ್ ನಟಿ ಸೋನಲ್ ಮೊಂತೆರೋ ವಿವಾಹದ ಬೆನ್ನಲ್ಲೇ ಮತ್ತೊಂದು ಮದುವೆ ಸಂಭ್ರಮ ನೆರವೇರಲಿದೆ. ಹೌದು, ಕನ್ನಡ, ತುಳು, ತೆಲುಗು, ತಮಿಳು ಚಿತ್ರಗಳಲ್ಲಿ ನಾಯಕಿ ನಟಿಯಾಗಿ ನಟಿಸಿದ್ದ ಚಿರಶ್ರೀ
ಅಂಚನ್ ಮುಂಬೈ ಲೋನಾವಾಲದ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಫೆಬ್ರವರಿ 3ರಂದು ಮಂಗಳೂರಿನಲ್ಲಿ ವಿವಾಹ ನಡೆಯಲಿದೆ.
ಪವಿತ್ರಾ ಚಿತ್ರದ ಮೂಲಕ ಕೋಸ್ಟಲ್‌ವುಡ್‌ ಪದಾರ್ಪಣೆ ಮಾಡಿದ ಚಿರಶ್ರೀ ಅಂಚನ್ ನಾಲ್ಕು ತುಳು ಸಿನಿಮಾ, ಕನ್ನಡದ ಕಲ್ಪನಾ 2. ಹುಲಿರಾಯ, ಉಡುಂಬಾ ಕಲಿವೀರ, ಕೂಪಮಂಡೂಕ. ಕಡಲ್, ಇಮಾನ್ದಾರ್, ಪ್ರೇಮಿಗಳ ಗಮನಕ್ಕಾಗಿ ಚಿತ್ರ ಸೇರಿ ತಮಿಳು ಮತ್ತು ತೆಲುಗು ಸಿನಿಮಾದಲ್ಲೂ ನಾಯಕಿ ನಟಿಯಾಗಿ ನಟಿಸಿದ್ದಾರೆ.
ಮೂಲತ ಹಳೆಯಂಗಡಿಯವರಾದ ಚಿರಶ್ರೀ ಅಂಚನ್ ರವರ ನಿಶ್ಚಿತಾರ್ಥಕ್ಕೆ ಕೆಪಿಸಿಸಿ ಸದಸ್ಯ ವಸಂತ್ ಬರ್ನಾಡ್,ಚಿರಶ್ರೀ ಅಂಚನ್ ತಾಯಿ ಹಳೆಯಂಗಡಿ ಗ್ರಾಮ ಮಾಜೀ ಅಧ್ಯಕ್ಷೆ ಪೂರ್ಣಿಮಾಮಧು ಮತ್ತಿತರರು ಹಾಜರಿದ್ದು ಶುಭ ಹಾರೈಸಿದ್ದಾರೆ.

Previous articleಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ
Next articleಸಂಚಾರ ದಟ್ಟಣೆ: ಆ್ಯಂಬುಲೆನ್ಸ್ ಗೆ ಅಡಚಣೆ