ಚಿಕ್ಕಮಗಳೂರು: ಮಂಡ್ಯ ತಾಲೂಕಿನ ನಾಗಮಂಗಲದಲ್ಲಿ ಕಲ್ಲುಬಯೋತ್ಪಾದಕರಿಂದ ವಿಘ್ನ ವಿನಾಶಕ ಮೂರ್ತಿಯ ಮೇಲೆ ಕಲ್ಲುತೂರಾಟ ನಡೆದಿದೆ. ಇದಕ್ಕೆಲ್ಲ ಮದ್ದು ಅರಿಯಬೇಕಾದರೆ ರಾಜ್ಯದಲ್ಲಿಯೂ ಉತ್ತರಪ್ರದೇಶ ಮಾದರಿಯ ಸರ್ಕಾರ ರಚನೆಯಾಗುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಟ್ವಿಟ್ ಮಾಡಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮಚ್ಚು ಲಾಂಗು ಹಿಡಿದುಕೊಂಡು ವಿನಾಯಕನ ಮೇಲೆ ಕಲ್ಲುತೂರಾಟ ನಡೆಸಿದ ಪುಂಡರ ಆಟಾಟೋಪಕ್ಕೆ ಹಲವರು ಗಾಯಾಳುಗಳಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಜ್ಯಾದ್ಯಂತ ಮತಾಂತರ ಅಟ್ಟಹಾಸ ಮಿತಿಮೀರಿದೆ. ಮತಾಂಧತೆಯ ಗುಮ್ಮ ಅವರ ನೆತ್ತಿಗೆ ಏರಿ ಹಿಂದುಗಳು ಪ್ರತಿನಿತ್ಯ ನೋವನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.