Home ಅಪರಾಧ ಚಂದ್ರು ಅಪಘಾತವಲ್ಲ ಹತ್ಯೆ: ರಮೇಶ್ ದೂರು

ಚಂದ್ರು ಅಪಘಾತವಲ್ಲ ಹತ್ಯೆ: ರಮೇಶ್ ದೂರು

0
166
ರಮೇಶ

ದಾವಣಗೆರೆ: ನನ್ನ ಮಗನನ್ನ ಯಾರೋ ದುಷ್ಕರ್ಮಿಗಳು ಕೈ, ಕಾಲು ಕಟ್ಟಿ ಹಾಕಿ ಹೊಡೆದು, ಕೊಲೆ ಮಾಡಿ ಅಪಘಾತ ಆಗಿರುವ ರೀತಿ ಬಿಂಬಿಸಿ, ಕಾರನ್ನು ಜಖಂಗೊಳಿಸಿ ತುಂಗಾ ಕಾಲುವೆಗೆ ಹಾಕಲಾಗಿದೆ ಎಂದು ಮೃತ ಚಂದ್ರಶೇಖರ್ ತಂದೆ, ಎಂ.ಆರ್. ರಮೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಂದ್ರು ಕಿವಿಗೆ, ತಲೆಯ ನೆತ್ತಿಯ ಭಾಗದಲ್ಲಿ ಹಲ್ಲೆಮಾಡಿರುವ ಗುರುತುಗಳಿದ್ದು, ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಅನುಮಾನ ಬಾರದ ರೀತಿಯಲ್ಲಿ ಮುಚ್ಚಿಹಾಕಲು ಕಾರನ್ನು ಜಖಂಗೊಳಿಸಿ ಕಾಲುವೆ ಎಸೆದಿದ್ದಾರೆ. ಪೊಲೀಸ್ ಇಲಾಖೆ ಕೂಡಲೇ ಹತ್ಯೆಕೋರರನ್ನು ಬಂಧಿಸಿ ಕಲಂ. ೩೦೨, ೨೦೧, ೪೦೨ರಡಿಯಲ್ಲಿ ದೂರು ದಾಖಲಿಸಿ, ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.