ನಟಿ ಉಮಾಶ್ರೀ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌ ಪ್ರಧಾನ

0
14

ಬಳ್ಳಾರಿ: ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿವಿಯಿಂದ ನಟಿ‌ ಉಮಾಶ್ರೀ ಹಾಗೂ ಮರಣೋತ್ತರ ವಾಗಿ ಎಸ್.ಕೆ.ಮೋದಿ, ಮಠಾಧೀಶ ಚಂದ್ರಮೌಳೇಶ್ವರ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಶುಕ್ರವಾರ ಪ್ರಧಾನ ಮಾಡಲಾಯಿತು.
ವಿವಿಯ ಆವರಣದಲ್ಲಿ ಆಯೋಜನೆ ಮಾಡಿದ್ದ ೧೨ ನೇ ಘಟಿಕೋತ್ಸವ ಸಮಾರಂಭದಲ್ಲಿ ವಿವಿ ಕುಲಾಧಿಪತಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಪಸ್ಥಿತಿಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಪ್ರಧಾನ ಮಾಡಿದರು. ಪ್ರೊ.ಎಸ್.ಎಂ.ಶಿವಪ್ರಸಾದ್, ಕುಲಪತಿ ಪ್ರೊ.ಮುನಿರಾಜ್ ಸಾಥ್ ನೀಡಿದರು.
ಉಮಾಶ್ರೀ ಅವರು ರಂಗಭೂಮಿ, ಕಲೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಸಾಧನೆಗೈದಿದ್ದರೆ, ಕೈಗಾರಿಕೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಕೈ ಜೋಡಿಸಿದ ಎಸ್.ಕೆ.ಮೋದಿ, ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ನಿರಂತರ ಸೇವೆಗಾಗಿ‌ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪಡೆದ ಎಸ್.ಕೆ.ಮೋದಿ ಪರವಾಗಿ ಅವರ ಪತ್ನಿ ಎಸ್.ಕೆ.ಮಂಜು ಹಾಗೂ ಚಂದ್ರಮೌಳೇಶ್ವರ ಸ್ವಾಮೀಜಿ ಪರವಾಗಿ ಅವರ ಮಠದ ಉತ್ತರಾಧಿಕಾರಿ ಗೌರವ ಡಾಕ್ಟರೇಟ್ ಸ್ವೀಕರಿಸಿದರು.

Previous articleಬೈಕ್ ಮುಖಾಮುಖಿ ಡಿಕ್ಕಿ: ವೈದ್ಯೆ, ಟೆಕ್ಕಿ ಸೇರಿ ಮೂವರ ಸಾವು
Next articleಕಾಂಕ್ರೀಟ್ ಲಾರಿ ಹಾಯ್ದು ಹೆಡ್ ಕಾನಸ್ಟೇಬಲ್ ಸಾವು