ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ನ ೯ನೇ ದಿನ ಭಾರತಕ್ಕೆ ಜುಡೋದಲ್ಲಿ ಕಂಚಿನ ಪದಕ ಒಲಿದು ಬಂದಿದ್ದು, ಒಟ್ಟು ಪದಕಗಳ ಸಂಖ್ಯೆ ೨೫ಕ್ಕೆ ತಲುಪಿದೆ. ಜುಡೋ ಪಟು ಭಾರತದ ಕಪಿಲ್ ಪರ್ಮಾರ್, ಪದಕ ಗೆಲ್ಲುವ ಮೂಲಕ ಇದೇ ಮೊದಲ ಬಾರಿಗೆ ಭಾರತ ಪ್ಯಾರಾಲಿಂಪಿಕ್ಸ್ ಇಷ್ಟೊಂದು ಪದಕಗಳನ್ನು ಗೆದ್ದ ಸಾಧನೆ ಮಾಡಿದೆ. ೬೦ ಕೆ.ಜಿ ಜೆ೧ ವಿಭಾಗದಲ್ಲಿ ಕೊನೆಗೂ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಕಪಿಲ್ ಬ್ರೆಜಿಲ್‌ನ ಎಲಿಯೆಲ್ಟನ್ ಡಿ ಒಲಿವೇರಾ ಅವರನ್ನು ಇಪ್ಪಾನ್ ಮೂಲಕ ೩೩ ಸೆಕೆಂಡುಗಳಲ್ಲಿ ಸೋಲಿಸಿ ಕಂಚಿನ ಪದಕವನ್ನು ಪಡೆದರು. ಸದ್ಯ ಭಾರತ ೨೫ ಪದಕಗಳನ್ನು ಗೆದ್ದಿದ್ದು, ೫ ಚಿನ್ನ, ಒಂಬತ್ತು ಬೆಳ್ಳಿ ಮತ್ತು ೧೧ ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.