ಹುಬ್ಬಳ್ಳಿ: ಯುಯುಸಿಎಂಎಸ್ ತಂತ್ರಾಂಶದ ಲೋಪದೋಷದಿಂದ ಎನ್‌ಇಪಿಯಡಿ ಪ್ರಥಮ ವರ್ಷದ ಪದವಿ ಮುಗಿಸಿರುವ ವಿದ್ಯಾರ್ಥಿಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಜೊತೆಗೆ ವಿದ್ಯಾರ್ಥಿ ವೇತನ ಪಡೆಯಲೂ ಕಷ್ಟಪಡಬೇಕಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ವಿದ್ಯಾರ್ಥಿಗಳು, ಯುಯುಸಿಎಂಎಸ್ ತಂತ್ರಾಂಶದ ಲೋಪದೋಶದಿಂದ ಎನ್‌ಇಪಿ ಪ್ರಥಮ ವರ್ಷದ ಪದವಿ ಮುಗಿಸಿರುವ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಮಾಡಿ, ಫಲಿತಾಂಶವನ್ನು ನೀಡಿಲ್ಲ. ಇದರಿಂದ ಗೊಂದಲದಲ್ಲಿ ಶಿಕ್ಷಣ ಮುಂದುವರೆಸುವಂತಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ತಂತ್ರಾಂಶದಿಂದ ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕಳೆದ ಎರಡು ವರ್ಷದಿಂದ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆತಿರುವುದಿಲ್ಲ. ರಾಜ್ಯ ಸರಕಾರ ಕೂಡಲೇ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ಮಹಾನಗರ ಕಾರ್ಯದರ್ಶಿ ಶಿವಕುಮಾರ ಮಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ, ರಾಘವೇಂದ್ರ, ಪುಷ್ಪಾ, ನಿಶಾ, ಸಿದ್ದಾರ್ಥ, ಹಿತೇಶ, ಅನುಜ, ಪ್ರೀತಮ್, ಚನ್ನಬಸವ, ಶ್ರೇಯಾ, ಪ್ರೇಮಾ, ಕಿರಣ, ಸುಪ್ರೀತ್, ವಿಶಾಲ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.

























