ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಬಂಧನ ಹಿನ್ನಲೆಯಲ್ಲಿ ಆಧ್ಯಾತ್ಮಕ ಪುಸ್ತಕಗಳ ಮೊರೆ ಹೋಗಿದ್ದಾರೆ.
ಲಲಿತ ಸಹಸ್ರನಾಮ ಶ್ಲೋಕ ಪುಸ್ತಕ ಹಾಗೂ ಆಧ್ಯಾತ್ಮ ಪುಸ್ತಕಗಳನ್ನು ನೀಡಲಾಗಿದೆ, ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಒಂಟಿಯಾಗಿರುವ ನಟ ದರ್ಶನ್ ಆಧ್ಯಾತ್ಮ ಪುಸ್ತಕಗಳ ಮೊರೆ ಹೋಗಿದ್ದಾರೆ. ಎರಡು ಪುಸ್ತಕಗಳನ್ನ ಬ್ಯಾಗ್‌ನಲ್ಲಿ ತಂದಿದ್ದ ನಟ ದರ್ಶನ್‌ಗೆ ಪುಸ್ತಕಗಳನ್ನು ನೀಡಲಾಗಿದೆ.
ಮುಂದುವರಿದ ಭದ್ರತೆ: ನಟ ದರ್ಶನ್ ಬಳ್ಳಾರಿ ಜೈಲ್ ಬಲ್ಲಿ ಬಂಧಿಯಾಗಿರುವ ಕಾರಣ ಸೆಂಟ್ರಲ್ ಜೈಲಿಗೆ ಬಿಗಿ ಭದ್ರತೆ ಇವತ್ತು ಮುಂದುವರಿದಿದೆ. ಜೈಲ್ ಮುಂಭಾಗದಲ್ಲಿ ಹಾಗೂ ಒಳ ಭಾಗದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.
ಇಂದು ಮಟನ್ ಊಟ: ಜೈಲು ನಿಯಮದ ಪ್ರಕಾರ ವಾರದಲ್ಲಿ ಒಂದು ದಿನ ನಾನ್ ವೆಜ್ ಊಟ ಕೈದಿಗಳಿಗೆ ನೀಡಲಾಗುತ್ತದೆ. ವಾರದಲ್ಲಿನ ಪ್ರತಿ ಶುಕ್ರವಾರ ಮಟನ್, ಚಿಕನ್ ಊಟ ನೀಡಲಾಗುತ್ತದೆ. ಒಂದು ವಾರ ಮಟನ್, ಒಂದು ವಾರ ಚಿಕನ್ ಊಟ ನೀಡಲಾಗುತ್ತದೆ. ಈ ವಾರ ಮಟನ್ ಊಟ ನೀಡಲಾಗುತ್ತಿದೆ.