ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ

0
26

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೊಯ್ನಾ ಜಲಾಶಯ ಸಂಪೂರ್ಣ ಭರ್ತಿ ಆಗಿದ್ದು ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ.
ಭರ್ತಿಯಾದ ಹಿನ್ನೆಲೆಯಲ್ಲಿ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹಾಗೂ ವೇದಗಂಗಾ, ಪಂಚಗಂಗಾ, ವೇದಗಂಗಾ, ಹೀರಣ್ಯಕೇಶಿ ಹಾಗೂ ಕೃಷ್ಣಾ ನದಿ ಒಳ ಹರಿವಿನಲ್ಲಿ ಬಾರಿ ಏರಿಕೆಯಾಗಿದ್ದು ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆ ಇದ್ದು, ಕರ್ನಾಟಕ ಮಹಾರಾಷ್ಟ್ರದ ಸಂಪರ್ಕಿಸುವ ಕುಡಚಿ – ಉಗಾರ ಸೇತುವೆ ಜಲಾವೃತಗೊಂಡಿದೆ, ಒಂದೇ ತಿಂಗಳಲ್ಲಿ ಎರಡು ಬಾರಿ ಮುಳಗಡೆಯಾದ ಉಗಾರ – ಕುಡಚಿ ಸೇತುವೆಯು ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಮಹಾರಾಷ್ಟ್ರ – ಕರ್ನಾಟಕ ವ್ಯಾಪಾರ ವಹಿವಾಟಿಗೆ ಅನಕೂಲವಾಗಿತ್ತು, ಈ ಬ್ರಿಜ್ ಜಲಾವೃತದಿಂದ ಉಗಾರ – ಕುಡಚಿ ಬ್ರಿಜ್ ಎರಡು‌ ಕಡೆ ಬ್ಯಾರಿಕೆಡ ಹಾಕಿ ಜಿಲ್ಲಾಡಳಿತವು ಪೊಲೀಸ್ ನಿಯೋಜನೆ ಮಾಡಿದೆ.

Previous articleಪಡಿತರದಲ್ಲಿ ಪ್ಲಾಸ್ಟಿಕ್‌ ಅಕ್ಕಿ: ಸ್ಪಷ್ಟನೆ ನೀಡಿದ ಆಹಾರ ಇಲಾಖೆ
Next articleಕಾರ್ಖಾನೆ ವಿಷಯದಲ್ಲೂ ದ್ವೇಷದ ರಾಜಕಾರಣ