ಬೈಕ್ ಅಪಘಾತ ಓರ್ವ ಸಾವು

0
10

ಹುಬ್ಬಳ್ಳಿ: ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಗದಗ ರಸ್ತೆಯಲ್ಲಿನ ಬಂಡಿವಾಡ ಬಳಿ ನಡೆದಿದೆ.
ಸ್ಥಳದಲ್ಲೇ ಮಂಟೂರ ಗ್ರಾಮದ ಬೈಕ್ ಸವಾರ ಶಂಕರ ಕೊರವರ ಮೃತಪಟ್ಟಿದ್ದು, ಬೈಕ್‌ನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಗಾಯಗೊಂಡವರನ್ನು ನಾಗರಳ್ಳಿ ಗ್ರಾಮದವರು ಎನ್ನಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleಬಾಹ್ಯಾಕಾಶಕ್ಕೆ ಹಾರಲಿವೆ ಧಾರವಾಡದ ನೊಣಗಳು
Next articleಪ.ಪಂ ಬಿಜೆಪಿ ೬ ಸದಸ್ಯರ ಹೈಜಾಕ್?