ಅನುಪಯುಕ್ತ ಬಸ್ ಭೋಜನಾ ಬಂಡಿಯಾಗಿ ಪರಿವರ್ತನೆ

0
42

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅನುಪಯುಕ್ತ ಬಸ್ಸನ್ನು ಭೋಜನಾ ಬಂಡಿಯನ್ನಾಗಿ (ಮೊಬೈಲ್‌ ಕ್ಯಾಂಟೀನ್‌) ಪರಿವರ್ತಿಸಿರುವ ವಿಷಯವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ಈ ಕುರಿತಂತೆ ಪೋಸ್ಟ್‌ ಮಾಡಿದ್ದು ಕೇಂದ್ರೀಯ ಕಾರ್ಯಗಾರ 4 ರ ತಾಂತ್ರಿಕ ಸಿಬ್ಬಂದಿಗಳ ಕಠಿಣ ಪರಿಶ್ರಮ ಮತ್ತು ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಕೇಂದ್ರೀಯ ಕಾರ್ಯಗಾರ-4ರ ತಾಂತ್ರಿಕ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದ್ದಾರೆ. ಈ ಸರಳ ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್.ಆರ್, ನಿರ್ದೇಶಕ ಶಿಲ್ಪಾ.ಎಂ ಮತ್ತು ಮುಖ್ಯ ತಾಂತ್ರಿಕ ಅಭಿಯಂತ ಎ.ಎನ್.ಗಜೇಂದ್ರ ಕುಮಾರ್ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದಿದ್ದಾರೆ.

Previous articleದರ್ಶನ ಹಿಂಡಲಗಾ ಜೈಲಿಗೆ..?
Next article35 ಅಡಿ ಎತ್ತರದ ಶಿವಾಜಿ ಪ್ರತಿಮೆ ಕುಸಿತ