ಕೃಷಿ ಭೂಮಿ ಭೂಸ್ವಾಧೀನ ತಡೆಗೆ ಸಚಿವ ಎಂ. ಬಿ. ಪಾಟೀಲಗೆ ಮನವಿ

0
35

ಬೆಂಗಳೂರು: 500 ಎಕರೆ ಕೃಷಿ ಭೂಮಿಯನ್ನ ಕೆ.ಐ.ಎ.ಡಿ.ಬಿ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಸ್ತಾವವನ್ನು ಕೈಬಿಡುವಂತೆ ಮನವಿಗೆ ರಾಜ್ಯ ಸಚಿವ ಎಂ. ಬಿ. ಪಾಟೀಲ್‌ ಸ್ಪಂದಿಸಿದ್ದಾರೆ ಎಂದು ಮಾಜಿ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೆಲಮಂಗಲ ತಾಲ್ಲೂಕಿನ ಸೋಂಪುರ, ಹನುಮಂತಪುರ ಹಾಗು ತ್ಯಾಮಗೊಂಡ್ಲು ಹೋಬಳಿಯ ಕೋಡಿಪಾಳ್ಯ ಮತ್ತು ಬಿದಲೂರು ಗ್ರಾಮದ ಸುಮಾರು 500 ಎಕರೆ ಕೃಷಿ ಭೂಮಿಯನ್ನ ಕೆ.ಐ.ಎ.ಡಿ.ಬಿ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಸ್ತಾವವನ್ನು ಕೈಬಿಡುವಂತೆ ಮನವಿ ಮಾಡಿ ನಾನು ಬರೆದಿದ್ದ ಪತ್ರಕ್ಕೆ ಸನ್ಮಾನ್ಯ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಪ್ರಸ್ತಾವವನ್ನು ಮರುಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ. ಸದರಿ ಜಮೀನುಗಳಲ್ಲಿ ತೆಂಗು, ಅಡಿಕೆ, ಬಾಳೆ ಮುಂತಾದ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಕೃಷಿಯನ್ನೆ ನಂಬಿ ಬದುಕುತ್ತಿರುವ ರೈತರ ಹಿತದೃಷ್ಟಿಯಿಂದ ಈ ಭೂಸ್ವಾದೀನ ಪ್ರಸ್ತಾವವನ್ನು ಯಾವುದೇ ಕಾರಣಕ್ಕೂ ಕೈಗೆತ್ತಿಕೊಳ್ಳಬಾರದು ಎಂದು ರೈತರ ಪರವಾಗಿ ಮಾನ್ಯ ಸಚಿವರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದಿದ್ದಾರೆ

Previous articleಗುತ್ತಿಗೆ ಕಾರ್ಮಿಕರ ವತಿಯಿಂದ ಸಂಸದ ಚೌಟರಿಗೆ ಮನವಿ
Next articleಉಕ್ರೇನ್‌ಗೆ ‘ಭೀಷ್ಮ ಕ್ಯೂಬ್’ ಉಡುಗೊರೆ