ಕೈಗೊಂಬೆ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೆ?

0
26

ಬೆಂಗಳೂರು: ರಾಜ್ಯಪಾಲರು ಕೇಂದ್ರದ ಕೈಗೊಂಬೆ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೆ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.


ಈ ಕುರಿತಂತೆ ಮಾತನಾಡಿರುವ ಅವರು ನಕಲಿ ಹೋರಾಟಗಾರರು ಸೃಷ್ಟಿಸಿದ ಪ್ರಹಸನವನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಬುಡಮೇಲು ಮಾಡುವುದಕ್ಕೆ ರಾಜಭವನವನ್ನು ಕೇಂದ್ರ ದುರ್ಬಳಕೆ ಮಾಡಿಕೊಂಡಿದೆ. ಸಂವಿಧಾನದ 163ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಮಾಡಿರುವ ರಾಜ್ಯಪಾಲರು ಕೇಂದ್ರದ ಕೈಗೊಂಬೆ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೆ? ಸಿದ್ದರಾಮಯ್ಯನವರ ನಿಷ್ಕಳಂಕ ರಾಜಕೀಯ ಬದುಕಿಗೆ ಚ್ಯುತಿ ತರುವ ನಿಮ್ಮ ಪ್ರಯತ್ನಗಳು ಫಲ ನೀಡದು. ಕೇಂದ್ರ ಸರ್ಕಾರ, ಹಾಗೂ ರಾಜ್ಯ ಬಿಜೆಪಿ ಜೆಡಿಎಸ್‌ ಹಾಗೂ ಸಂಘ ಪರಿವಾರದ ಷಡ್ಯಂತ್ರವನ್ನು ನಾವು ಹಿಮ್ಮೆಟ್ಟಿಸುತ್ತೇವೆ. ವಿಪಕ್ಷದ ಸರ್ಕಾರವನ್ನು ಉರುಳಿಸುವ ಹೀನ ರಾಜಕೀಯವನ್ನು ಬಿಟ್ಟು ಬಿಜೆಪಿ ರಾಜಧರ್ಮ ಪಾಲಿಸಲಿ ಎಂದಿದ್ದಾರೆ.

Previous articleವೈದ್ಯರ ಮುಷ್ಕರ: ಚೇಳು ಕಡಿದವನಿಗೆ ಸಿಗದ ಔಷಧಿ, ಆಸ್ಪತ್ರೆ ಆವರಣದಲ್ಲಿ ಪರದಾಟ
Next articleಸಿದ್ದರಾಮಯ್ಯ ರಾಜಿನಾಮೆ ಕೊಡಲಿ