ದೇಶದ ರಕ್ಷಣೆ-ಏಕತೆ ನಮ್ಮೆಲ್ಲರ ಹೊಣೆ

0
13

ಬೆಳಗಾವಿ: ಸುವರ್ಣ ಕಾಲಘಟ್ಟದಲ್ಲಿರುವ ನಮ್ಮ ಮೇಲೆ ದೇಶದ ಏಕತೆ-ಸಮಗ್ರತೆಯ ರಕ್ಷಣೆಯ ಜತೆಗೆ ಪ್ರಗತಿಯ ರಥ ಹಾಗೂ ಸ್ವಾತಂತ್ರ‍್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಇದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ೭೮ನೇ ಸ್ವಾತಂತ್ರೋತ್ಸವ ದಿನಾಚರಣೆಯ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶ ಸ್ವತಂತ್ರಗೊಂಡು ಇಂದಿಗೆ ೭೭ ವರ್ಷಗಳಾದವು. ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ಭಾರತೀಯರು ಗಳಿಸಿದ ಸ್ವಾತಂತ್ರ‍್ಯವು ಜಗತ್ತಿನ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯ ಆರಂಭಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರತವು ಭದ್ರ ಬುನಾದಿ ಹಾಕಿದೆ ಎಂದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ೭೮ನೇ ಸ್ವಾತಂತ್ರ‍್ಯೊತ್ಸವ ದಿನಾಚರಣೆಯ ಧ್ವಜಾರೋಹಣದ ನಂತರ ಜರುಗಿದ ವಿವಿಧ ಕವಾಯತ ಪಡೆಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಗೌರವ ವಂದನೆ ಸ್ವೀಕರಿಸಿದರು.

Previous articleಮೊದಲ ಎಲಿಮೆಂಟ್ ಅಳವಡಿಕೆ ಆರಂಭ
Next articleದೇವರಲ್ಲಿ ಭಕ್ತಿ ಎಷ್ಟು ಮುಖ್ಯವೋ ದೇಶ ಭಕ್ತಿಯೂ ಅಷ್ಟೇ ಮುಖ್ಯ