ಸಿಲಿಂಡರ್ ಸ್ಫೋಟ: ಸಾಮಗ್ರಿ ನಾಶ

0
31

ಬೆಳಗಾವಿ: ಬೆಳಗಾವಿಯ ಮಾರುತಿನಗರದ ಮಹಾವೀರ ಕಾಲನಿಯ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಭಾರೀ ಅನಾಹುತವೊಂದು ನಡೆದಿದೆ.
ಚನ್ನಪ್ಪ ವಿಠ್ಠಲ ಲಮಾಣಿ ಎಂಬುವನ ಮನೆಯಲ್ಲಿ ಈ ಘಟನೆ ಸಂಭವಿಸಿದ್ದು, ಸೋಮವಾರ ತಡರಾತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಘಟನೆ ನಡೆದಿದೆ. ಹಾಗಾಗಿ ಯಾವುದೇ ಸಾವು ನೋವು ವರದಿಯಾಗಿಲ್ಲ.
ಆದರೆ ವಿಠ್ಠಲ ಲಮಾಣಿ ಅವರು ಕೂಲಿ ಕೆಲಸ ಮಾಡಿ ಕೂಡಿಟ್ಟಿದ್ದ ೧.೮೦ ಸಾವಿರ ನಗದು ಹಾಗೂ ೩೫ ಗ್ರಾಂ ಚಿನ್ನ ಬೆಂಕಿಪಾಲಾಗಿದೆ. ಇನ್ನೂ ಈ ಘಟನೆ ನಡೆದ ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ದಳದ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಹೊಟೇಲ್ ರೂಮಿನಲ್ಲಿ ಕುಕ್ಕರ್ ಸ್ಫೋಟ: ಹಲವರಿಗೆ ಗಾಯ
Next articleಕಲುಷಿತ ನೀರು ಕುಡಿದು 41 ಜನ ಅಸ್ವಸ್ಥ