ಪಿಎಸ್ಐ ಸಾವು ಪ್ರಕರಣ: ಶಾಸಕ ಮತ್ತು ಪುತ್ರನ ಬಂಧನಕ್ಕೆ ಅಗ್ರಹ

0
37

ಯಾದಗಿರಿ: ಪಿಎಸ್ಐ ಪರಶುರಾಮ ಸಾವಿಗೆ ಕಾರಣರಾದ ಶಾಸಕ ಚನ್ನಾರೆಡ್ಡಿ ಪಾಟಿಲ ಹಾಗು ಪುತ್ರ ಸನ್ನಿ ಅವರನ್ನು ಬಂದಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ನಾರಾಯಣ ಸ್ವಾಮಿ ಛಲವಾದಿ ಅಗ್ರಹಿಸಿದರು.


ಯಾದಗಿರಿ ಶಾಸಕರು ದಲಿತ ವಿರೋಧಿಗಳಾ ಗಿದ್ದಾರೆ.ದಲಿತರ ಮತಗಳು ಬೇಕು ಅದ್ರೆ ದಲಿತ ಅಧಿಕಾರಿ ಬೇಡವೇ? ಎಂದು ಖಾರವಾಗಿ ಪ್ರಶ್ನಿಸಿದರು.
ಪೊಲೀಸ್ ಅಧಿಕಾರಿ ಪರಶುರಾಮ ರವರ ಅನುಮಾನಾಸ್ಪದ ಸಾವಿಗೆ ಕಾರಣರಾದ ಶಾಸಕ ಮತ್ತು ಅವರ ಪುತ್ರರನನ್ನು ಬಂದಿಸುವಂತೆ ಅಗ್ರಹಿಸಿ ಜಿಲ್ಲಾ ಬಿಜೆಪಿ ಯಿಂದ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಆಯೋಜಿಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಶಾಸಕ ತುನ್ನೂರ ಅವರ ಕೆಲಸಗಳಿಗೆ ಎಐಸಿಸಿ ಅಧ್ಯಕ್ಷ ಹಾಗೂ ಅವರ ಪುತ್ರ ರ ಶ್ರೀರಕ್ಷೆ ಇದೆ ಎಂದು ಅರೋಪಿಸಿದರು


ಪ್ರತಿಭಟನೆಯಲ್ಲಿ ಮಾಜಿ ಸಚಿವ ಎನ್. ಮಹೇಶ್, ಮಾಜಿ ಸಚಿವ ರಾಜೂಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಅಮೀನ ರೆಡ್ಡಿ, ನಿಕಟ್ಟ ಪೂರ್ವ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ಸೇರಿದಂತೆ ಮಂಡಲ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು, ಪ್ರಮುಖ ಮುಖಂಡರು, ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಇದ್ದರು.

Previous articleಶೇಖ್ ಹಸೀನಾ ವಿರುದ್ಧ ಕೊಲೆ ಕೇಸ್ ದಾಖಲು
Next articleಜಯದೇವ ಆಸ್ಪತ್ರೆ ಸೆಪ್ಟೆಂಬರ್ 17 ಕ್ಕೆ ಅನಾವರಣ