ಭಗವಂತನ ಮೇಲೆ‌ ಭಾರ ಹಾಕಿ ಗೇಟ್ ಕೂಡಿಸಲಾಗುವುದು

0
27

ಬಳ್ಳಾರಿ: ಗೇಟ್ ಅಯುಷ್ಯು 40 ವರ್ಷ ಇರುತ್ತದೆ ಇದೀಗ ಜಲಾಶಯಕ್ಕೆ 70 ವರ್ಷವಾಗಿದೆ ಎಂದು ಗೇಟ್ ಪರಿಶೀಲನೆ ಮಾಡುತ್ತಿರುವ ಹಿರಿಯ ತಜ್ಞ ಕನ್ನಯ್ಯ ನಾಯ್ಡು ಹೇಳಿದ್ದಾರೆ.


ಸಿಎಂ ಆಗಮನಕ್ಕೂ ಮುನ್ನವೇ ಜಲಾಶಯಕ್ಕೆ ಆಗಮಿಸಿರುವ ಕನ್ನಯ್ಯ ನೇತೃತ್ವದ ತಜ್ಞರ ತಂಡವು, ಪರಿಶೀಲನೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಕನ್ಹಯ್ಯ ನಾಯ್ಡು ಅವರು ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸೋದು ಕಷ್ಟ. 48 ಟನ್ ಭಾರದ ಗೇಟ್ ಒಂದೇ ಬಾರಿ ಇಳಿಸೋದು ಸಹ ಕಷ್ಡ. ಐವತ್ತು ಟನ್ ಭಾರದ ಐದು ಪೀಸ್ ಕಬ್ಬಿಣ ಗೇಟ್ ಒಂದೊಂದು ಇಳಿಸುತ್ತೇವೆ. ಮೂರು ನಾಲ್ಕು ಕಡೆ ಗೇಟ್ ನಿರ್ಮಾಣವಾಗ್ತಿದೆ. ನಾಳೆಯಿಂದ ಒಂದೊಂದೇ ಪೀಸ್ ಗಳನ್ನು ಹಾಕಲಾಗುವುದು. ಭಗವಂತನ ಮೇಲೆ ಭಾರ ಹಾಕಿ ಕೆಲಸ ಪ್ರಾರಂಭ ಮಾಡುತ್ತೇವೆ. ನೀರು ಉಳಿಸುವ ಎಲ್ಲಾ ಪ್ರಯತ್ನ ನಡೆಯುತ್ತಿದ್ದು. ಇದೀಗ ಹೊಸ ಪ್ರಯತ್ನದ ಮೂಲಕ ನೀರು ನಿಲ್ಲಿಸುವ ಕೆಲಸ ಮಾಡಲಿದ್ದೆವೆ. ಇದು ಟೆಂಪರ್ ವೆರಿ ವರ್ಕ್ ಆಗಿದ್ದು ನೀರು ಕಡಿಮೆಯಾದ ಮೇಲೆ ‌ಮತ್ತೊಮ್ಮೆ ಗೇಟ್ ಕೂಡಿಸಬೇಕು ಎಂದು ಹೇಳಿದ್ದಾರೆ.

Previous article115ಕೋಟಿಯ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಿದ ಸಾಗರ್‌ ಖಂಡ್ರೆ
Next articleಸಿಎಂಗೆ ಬಿಸಿಲು: ಕೊಡೆ ಹಿಡಿದ ಪೊಲೀಸರು