Home Advertisement
Home ತಾಜಾ ಸುದ್ದಿ ದೂದಸಾಗರ್ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು ಹುಬ್ಬಳ್ಳಿ – ಗೋವಾ ಮಾರ್ಗ ಪ್ರಯಾಣಿಕರಿಗೆ 25...

ದೂದಸಾಗರ್ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು ಹುಬ್ಬಳ್ಳಿ – ಗೋವಾ ಮಾರ್ಗ ಪ್ರಯಾಣಿಕರಿಗೆ 25 ಬಸ್ ವ್ಯವಸ್ಥೆ

0
60

ಹುಬ್ಬಳ್ಳಿ : ದೂದ್ ಸಾಗರ್ ಬಳಿ ಗೂಡ್ಸ ರೈಲೊಂದು ಹಳಿತಪ್ಪಿದ್ದರಿಂದ ಹುಬ್ಬಳ್ಳಿ- ಗೋವಾ ಮಾರ್ಗದ ರೈಲು ಸಂಪರ್ಕ ಕಡಿತವಾಗಿದೆ. ಹಲವಾರು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಅಮರಾವತಿ ಎಕ್ಸಪ್ರೆಸ್ (ಟ್ರೈನ್ ಸಂಖ್ಯೆ: 18047 ) ಶಾಲಿಮಾರ್ ನಿಂದ ವಾಸ್ಕೊ ಡ ಗಾಮಾ ಕ್ಕೆ ಹೋಗಬೇಕಾಗಿದ್ದು ಹುಬ್ಬಳ್ಳಿಯಲ್ಲಿ ಪ್ರಯಾಣ ಮೊಟಕುಗೊಳಿಸಲಾಗುತ್ತಿದೆ. ಈ ರೈಲು ಹುಬ್ಬಳ್ಳಿಗೆ 1.54 ಕ್ಕೆ (13:54ಕ್ಕೆ ) ಆಗಮಿಸಲಿದೆ. ಈ ರೈಲಿನಲ್ಲಿ ವಾಸ್ಕೊ ಡ ಗಾಮಾಕ್ಕೆ ಹೋಗಲು ಸುಮಾರು 1200 ಪ್ರಯಾಣಿಕರಿದ್ದಾರೆ.
ರೈಲ್ವೆ ಇಲಾಖೆಯ ಕೋರಿಕೆಯ ಮೇರೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ನೇರವಾಗಿ ವಾಸ್ಕೋ ಗೆ 25 ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

Previous articleಬಿಜೆಪಿಯವರು ರಾಜಕಾರಣ ಮಾಡುವುದು ಸರಿಯಲ್ಲ
Next articleಕ್ರಸ್ಟ್ ಗೇಟ್ ತಯಾರಿ ವೀಕ್ಷಿಸಿದ ತಂಗಡಗಿ