ಪ್ರಧಾನಿ ಕಾರ್ಯಕ್ರಮದಲ್ಲಿ ಚಿಕ್ಕೋಡಿ ವಿದ್ಯಾರ್ಥಿ

0
33

ಚಿಕ್ಕೋಡಿ: ತಾಲೂಕಿನ ಕೆರೂರ ಸರಕಾರಿ ಪಪೂ ಕಾಲೇಜಿನ ವಿದ್ಯಾರ್ಥಿ, ಎನ್‌ಎಸ್‌ಎಸ್ ಸ್ವಯಂ ಸೇವಕ ಸಾಗರ್ ಮಲ್ಲಪ್ಪ ಬೆಕ್ಕೇರಿ ಸ್ವಾತಂತ್ರ್ಯೋತ್ಸವದಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳೊಂದಿಗೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಇಡೀ ರಾಜ್ಯದಲ್ಲಿ ಆರು ಜನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಕೆರೂರಿನ ಎನ್ಎಸ್ಎಸ್ ಸ್ವಯಂಸೇವಕ ಒಬ್ಬನಾಗಿದ್ದಾನೆ. ಕಾಲೇಜಿನ ಪ್ರಾಚಾರ್ಯರು, ಎಲ್ಲ ಉಪನ್ಯಾಸಕ ವರ್ಗ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಆತನಿಗೆ ಶುಭ ಹಾರೈಸಿದ್ದಾರೆ.

Previous articleಶ್ರೀರಂಗಪಟ್ಟಣ ತಲುಪಿದ ಮಿತ್ರ ಪಕ್ಷಗಳ ಮೈಸೂರು ಚಲೋ ಚಳುವಳಿ
Next articleನೀರಜ್ ಚೋಪ್ರಾಗೆ ಬೆಳ್ಳಿ