ಬಾಲಕಿ ಕೊಲೆ: ಆರೋಪಿ ಸೆರೆ

0
18
ಬಂಧನ

ಮಂಗಳೂರು: ಜೋಕಟ್ಟೆಯಲ್ಲಿ ಬೆಳಗಾವಿ ಮೂಲದ ಬಾಲಕಿಯ ಕೊಲೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂಲತಃ ಬೆಳಗಾವಿ ಜಿಲ್ಲೆಯ ಪ್ರಸ್ತುತ ಜೋಕಟ್ಟೆಯಲ್ಲಿ ವಾಸವಿದ್ದ ಫಕೀರಪ್ಪ(೫೫) ಎಂಬಾತನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಕತ್ತು ಹಿಸುಕಿ ಕೊಲೆಗೈದಿರುವುದಾಗಿ ಆರೋಪಿ ಫಕೀರಪ್ಪ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೋಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಹನುಮಂತಪ್ಪ ಎಂಬವರ ತಮ್ಮನ ೧೩ ವರ್ಷದ ಮಗಳು ಕೊಲೆಯಾದ ರೀತಿಯಲ್ಲಿ ಮಂಗಳವಾರ ಪತ್ತೆಯಾಗಿದ್ದಳು. ದ.ಕ. ಜಿಲ್ಲೆಯ ಹಾಸ್ಟೆಲ್‌ವೊಂದರಲ್ಲಿ ಕಲಿಯುತ್ತಿದ್ದ ಈಕೆ ಬಿದ್ದು ಕೈಗೆ ಗಾಯಗೊಂಡಿದ್ದ ಕಾರಣ ಜೋಕಟ್ಟೆಯಲ್ಲಿದ್ದ ದೊಡ್ಡಪ್ಪನ ಮನೆಗೆ ಬಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Previous articleಚಂದ್ರಯಾನ ತಂಡ ಸೇರಿ 32 ವಿಜ್ಞಾನಿಗಳಿಗೆ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ
Next articleಕಲ್ಲೂರು ಘಟನೆ: ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಸಾವು