ಜಮೀನಿಗೆ ನುಗ್ಗಿದ ಬಸ್: 15 ಜನರಿಗೆ ಗಾಯ

0
20

ರಾಯಚೂರು(ಮಾನ್ವಿ): ಬಸ್‌ನ ಸ್ಟೇರಿಂಗ್ ಕಟ್ಟಾದ ಪರಿಣಾಮ ರಸ್ತೆ ಪಕ್ಕದಲ್ಲಿರುವ ಜಮೀನಿಗೆ ಬಸ್ ನುಗ್ಗಿ 15 ಜನರು ಗಾಯಗೊಂಡ ಘಟನೆ ಭಾನುವಾರ ತಾಲ್ಲೂಕಿನ ನಸಲಾಪುರ ಕ್ರಾಸ್‌ನಲ್ಲಿ ನಡೆದಿದೆ.
ಐವರು ಗಂಭೀರವಾಗಿ ಗಾಯಗೊಂಡಿದ್ದು, 10 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಮಾನ್ವಿ ಘಟಕ ಬಸ್ ರಾಯಚೂರಿನಿಂದ ಗಂಗಾವತಿಗೆ ತೆರಳುತ್ತಿರುವಾಗ ಈ ಘಟನೆ ನಡೆದಿದೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Previous articleಬಾವಿಗೆ ಬಿದ್ದಿದ್ದ ವ್ಯಕ್ತಿ ರಕ್ಷಣೆ
Next articleಪಿಎಸ್ಐ ಸಾವು ಪ್ರಕರಣ: ಯಾದಗಿರಿಗೆ ಸಿಐಡಿ ತಂಡ ಭೇಟಿ