ಸರ್ಕಾರಿ ಶಾಲೆ, ಕಾಲೇಜುಗಳಿಗೆ ಬಣ್ಣ ಹಚ್ಚುವ ಅಭಿಯಾನ ಬಣ್ಣದರ್ಪಣೆ

0
11
BANNA

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 1177 ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಬಣ್ಣ ಹಚ್ಚುವಂತಹಬಣ್ಣದರ್ಪಣೆ’ ಎಂಬ ವಿಭಿನ್ನವಾದ ಅಭಿಯಾನವನ್ನು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಕೈಗೊಂಡಿದ್ದಾರೆ. ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸುವ ಮತ್ತು ಸ್ವಚ್ಛ ವಾತಾವರಣ ಕಲ್ಪಿಸುವ ದಿಶೆಯಲ್ಲಿ ಕೈಗೊಂಡ ಈ ಅಭಿಯಾನಕ್ಕೆ ಅಕ್ಟೋಬರ್ 29ರಂದು ಚಾಲನೆ ನೀಡಲಾಗುತ್ತಿದೆ.
ಅಭಿಯಾನದ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಿಎಸ್‌ಆರ್ ನಿಧಿಯಡಿ ವಿವಿಧ ಕಂಪನಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿದ್ದು, ಕ್ಷಮತಾ ಸಂಸ್ಥೆಯು ಅಭಿಯಾನದ ಅನುಷ್ಠಾನ ಮಾಡುತ್ತಿದೆ. ಈ ದೀಪಾವಳಿಯಿಂದ ಅಭಿಯಾನ ಆರಂಭಿಸಿದ್ದು, ಮುಂದಿನ ದೀಪಾವಳಿ ಹೊತ್ತಿಗೆ ಪೂರ್ಣಗೊಳಿಸುವ ಗುರಿ ಇದೆ ಎಂದು ಹೇಳಿದರು.
ಅ.29ರಂದು ಕುಂದಗೋಳದ ಹರಭಟ್ಟ ಶಾಲಾ ಮೈದಾನದಲ್ಲಿ ಸಂಜೆ 6 ಗಂಟೆಗೆ ಬಣ್ಣದರ್ಪಣೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ರಾಜ್ಯ ಸಭಾ ಸದಸ್ಯರು, ಚಲನಚಿತ್ರ ನಟರಾದ ಜಗ್ಗೇಶ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

Previous articleಜಿಮ್‌ನಲ್ಲಿ 5 ಲಕ್ಷ ಕೋಟಿ ಹೂಡಿಕೆ: ಸಚಿವ ನಿರಾಣಿ
Next articleಹಂಪಿಯಲ್ಲಿ ಬೆಂಕಿ ಅವಘಡ: ಸುಟ್ಟು ಭಸ್ಮವಾದ ಹೋಟೆಲ್