ವಿಷ ಆಹಾರ ಸೇವಿಸಿ ನಾಲ್ವರ ಸಾವು

0
27

ರಾಯಚೂರು:ವಿಷ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ನಿವಾಸಿಗಳಾದ ಭೀಮಣ್ಣ ಬಾಗ್ಲಿ(70) ಈರಮ್ಮ ಬಾಗ್ಲಿ. (62) ಮಲ್ಲೇಶ(21) ಪಾರ್ವತಿ(19)ಎಂದು ಗುರುತಿಸಲಾಗಿದೆ.
ಇನ್ನೊಬ್ಬ ಯುವತಿ ಮಲ್ಲಮ್ಮ ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಮನೆಯಲ್ಲಿ ಕುಟುಂದ ಎಲ್ಲ ಸದಸ್ಯರು ಮಾಂಸ ಸೇವನೆ ಮಾಡಿದ್ದಾರೆ. ಆರೋಗ್ಯದ ಮೇಲೆ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಸಂಬಂಧಿಗಳು ರಾಯಚೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸಿರವಾರ ಪೊಲೀಸರು ತನಿಖೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿದಿದ್ದಾರೆ.

Previous articleಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಮತ್ತೊಂದು ಗುಂಡಿನ ಸದ್ದು
Next articleಬೆಂಗಳೂರು ದೇಶದ ನ್ಯಾನೋ ಟೆಕ್‌ ಹಬ್‌