ಮುಖ್ಯಮಂತ್ರಿಗಳೇ ದೆಹಲಿಯಿಂದ ರಾಜ್ಯಕ್ಕೆ ಬನ್ನಿ

0
15

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರವಾಸ ಬಿಟ್ಟು ರಾಜ್ಯಕ್ಕೆ ಬರಲಿ, ನಿಮ್ಮ ಅಕ್ರಮಗಳಿಗೆ ಸ್ಪಷ್ಟನೆ ಕೊಡಲು ಅಲ್ಲಿಗೆ ಹೋಗಿದ್ದೀರಿ. ಅದೆಲ್ಲಾ ಮತ್ತೆ ಕೊಡಿ, ಮೊದಲು ರಾಜ್ಯದ ಜನರ ಸಮಸ್ಯೆ ಆಲಿಸಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಬಂಟ್ವಾಳದ ಜಕ್ರಿಬೆಟ್ಟು, ನಾವೂರು ಮೊದಲಾದ ನೆರೆ ಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ರಾಜ್ಯಾದ್ಯಂತ ಅಪಾರ ಹಾನಿ ಆಗಿದೆ, ಬೆಳೆ ಹಾನಿ ಅಗಿದೆ. ರಾಜ್ಯ ಸರಕಾರ ಸಮಾರೋಪದಿಯಲ್ಲಿ ಕೆಲಸ ಮಾಡಬೇಕಿದೆ ಎಂದು ಹೇಳಿದರು
ನಾನು ಕಂದಾಯ ಸಚಿವ ಆಗಿದ್ದಾಗ ರಾಜ್ಯ ಹಾಗೂ ಕೇಂದ್ರದಿಂದ ಸಮಾನ ಅನುದಾನ ನೀಡಿದ್ದೆ. ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಇದ್ದ ಗಂಜಿ ಕೇಂದ್ರವನ್ನು ನಾನು ಬದಲಿಸಿ ಕಾಳಜಿ ಕೇಂದ್ರ ಮಾಡಿ ಮನೆ ಊಟ ಕೊಟ್ಟಿದ್ದೆ. ಆದರೆ ಈಗ ಅಂಥದ್ದು ಎಲ್ಲೂ ನಮಗೆ ಕಾಣಿಸುತ್ತಿಲ್ಲ. ಮಂಗಳೂರಿಗೆ ಉಸ್ತುವಾರಿ ಮಂತ್ರಿ ಬರದೇ ೧೫ ದಿನ ಮೇಲಾಗಿದೆ. ಅವರ ಹೈಕಮಾಂಡ್ ಜಿಲ್ಲಾ ಮಂತ್ರಿ ಸ್ಥಳದಲ್ಲಿರಲು ಹೇಳಿದೆಯಂತೆ. ಆದರೆ ಎಲ್ಲೂ ಜಿಲ್ಲಾ ಮಂತ್ರಿಗಳು ಜನರ ಜೊತೆಗೆ ಕಾಣುತ್ತಿಲ್ಲ ಎಂದು ಆರೋಪಿಸಿದರು.

Previous articleರಾಜಸ್ಥಾನದಿಂದ ಬಂದ ಮಾಂಸವು ‘ಕುರಿ’ಯದ್ದೇ…
Next articleದ. ಕ. – ಮಳೆ ತಗ್ಗಿದರೂ ತಗ್ಗದ ಹಾನಿ