ಬೈಂದೂರು: ತಾಲೂಕಿನ ನಾಗೂರಿನ ರತ್ನಾಕರ ಉಡುಪರ ಬಾವಿಯಲ್ಲಿ ಮಂಗಳವಾರ ದಿಢೀರೆಂದು ಪ್ರತ್ಯಕ್ಷಗೊಂಡಿದ್ದ ಮೊಸಳೆಯನ್ನು ಬುಧವಾರ ಮಧ್ಯಾಹ್ನ ಬೈಂದೂರು ವಲಯ ಅರಣ್ಯ ಅಧಿಕಾರಿ ಸಂದೇಶ್ ಅವರ ನೇತ್ರತ್ವದಲ್ಲಿ ಸ್ಥಳೀಯರ ಸಹಕಾರದಿಂದ ಬಲೆಯ ಮೂಲಕ ಬಾವಿಯಲ್ಲಿರುವ ಮೊಸಳೆಯನ್ನು ಸೆರೆಹಿಡಿದು ಸುರಕ್ಷಿತವಾಗಿ ಅರಣ್ಯ ಇಲಾಖೆಯವರು ವಶಕ್ಕೆ ಪಡೆದುಕೊಂಡು ಸ್ಥಳಾಂತರಿಸಿದರು.
ಮೊಸಳೆಯನ್ನು ಬಾವಿಯಿಂದ ಹೊರ ತೆಗೆದ ತಕ್ಷಣ ಪಶು ವೈದ್ಯಧಿಕಾರಿ ನಾಗರಾಜ್ ಮರವಂತೆ ಅವರು ಅರಿವಳಿಕೆ ಚುಚ್ಚುಮದ್ದು ನೀಡಿ ಮೊಸಳೆ ಇಡಿಯಲು ಪ್ರಮುಖ ಪಾತ್ರವಹಿಸಿದ್ದರು. ನಿನ್ನೆಯಿಂದ ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿದ ಮೊಸಳೆಯನ್ನು ಸುರಕ್ಷಿತವಾಗಿ ಸೆರೆಹಿಡಿದರ ಪರಿಣಾಮ ಸ್ಥಳೀಯರ ಮುಖದಲ್ಲಿ ಮಂದಹಾಸ ನೋಡಿದೆ.
ಬೈಂದೂರು ತಹಸೀಲ್ದಾರ್ ಪ್ರದೀಪ್, ಬೈಂದೂರು ಪೊಲೀಸ್ ಠಾಣಾಧಿಕಾರಿ ತಿಮ್ಮೆಶ್ ಅಗ್ನಿಶಾಮಕ ದಳ, ಗ್ರಾಮ ಪಂಚಾಯತ್ ಆಡಳಿತ, ಹಾಗೂ ಸಾರ್ವಜನಿಕ ಉಪಸ್ಥಿತರಿದ್ದರು.


























