ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ..

0
15

ಕುಂದಾಪುರ: ನಾಗೂರು ಸಮೀಪದ ಕೊಡೇರಿ ವಡೇರ ಮಠ ವಿಶ್ವನಾಥ ಉಡುಪರ ಮನೆಯ ಕುಡಿಯುವ ನೀರಿನ ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಇಂದು ಪ್ರತ್ಯಕ್ಷವಾಗಿದೆ.
ದಾರಿ ತಪ್ಪಿ ಬಂದ ಮೊಸಳೆ ಬಾವಿಗೆ ಬಿದ್ದಿರಬಹುದು ಎನ್ನಲಾಗಿದೆ. ಬಾವಿಯ ಆವರಣ ಗೋಡೆ ತಗ್ಗಿನಲ್ಲಿರುವುದರಿಮದ ಮತ್ತು ಬಾವಿಯಲ್ಲಿ ನೀರು ತುಂಬಿರುವುದರಿಂದ ಆಕಸ್ಮಿಕವಾಗಿ ಮೊಸಳೆ ಬಾವಿಗೆ ಬಿದ್ದಿರಬಹುದು ಎಂದು ಅಂಚಾಜಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಬೃಹತ್ ಮೊಸಳೆಯನ್ನು ವೀಕ್ಷಿಸಲು ಧಾವಿಸಿದ್ದಾರೆ.
ಅರಣ್ಯಾಧಿಕಾರಿಗಳು, ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳೀಯರ ಸಹಾಯದಿಂದ ಮೊಸಳೆಯನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಪಶುವೈದ್ಯರೂ ಸ್ಥಳದಲ್ಲಿದ್ದಾರೆ. ಬೈಂದೂರು ಅರಣ್ಯ ಇಲಾಖೆ, ಪೋಲಿಸ್ ಇಲಾಖೆ, ಅಗ್ನಿಶಾಮಕ ದಳ ಕಂದಾಯ ಇಲಾಖೆ ಅವರ ಸಹಾಯದೊಂದಿಗೆ ಬಾವಿಗೆ ಬಲೆ ಹಾಕುವುದರ ಮೂಲಕ ಕಾರ್ಯಾಚರಣೆ ನಡೆಸಿದರು. ಸ್ಥಳೀಯರ ಸಹಾಯದಿಂದ ಅರಣ್ಯ ಇಲಾಖೆಯವರು ಮೊಸಳೆಗೆ ಬೋನ್ ಇಟ್ಟು ನಾಗೂರು ನೆಟ್‌ವರ್ಕ್ ಅಂಡ್ ಸೆಕ್ಯೂರಿಟಿ ಸಲ್ಯೂಷನ್ ಸಹಕಾರದೊಂದಿಗೆ ಬಾವಿಯ ಸುತ್ತಲೂ ಸಿ ಸಿ ಕ್ಯಾಮೆರಾವನ್ನು ಅಳವಡಿಸಿ ದೂರದಿಂದ ಕಂಪ್ಯೂಟರ್ ಮೂಲಕ ಮೊಸಳೆಯ ಓಡಾಟವನ್ನು ಗಮನಿಸಲಾಗುತ್ತಿದೆ.ಮೊಸಳೆ ಬಾವಿಯಿಂದ ಹೊರ ಬರಲು ಬಾವಿಯ ದಂಡೆಯನ್ನು ನೆಲಸಮಾನಕ್ಕೆ ಒಡೆದು ಮೊಸಳೆ ಬೋನಿಗೆ ಕೋಳಿಯ ಮಾಂಸವನ್ನು ಹಾಕಿ ಸದ್ಯಕ್ಕೆ ಇಡಲಾಗಿದೆ. ಮೊಸಳೆಯನ್ನು ಹಿಡಿಯಲು ಇಲಾಖೆಯ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ ಮೊಸಳೆ ಬಾವಿಯಲ್ಲಿ ಇರುವ ಮಾಹಿತಿ ಸಿಕ್ಕಿದಂತೆ ಸಾವಿರಾರು ಜನರು ಮೊಸಳೆ ನೋಡಲು ಬರುತ್ತಿದ್ದಾರೆ.ಜನರು ತಡೆಯಲು ಪೋಲಿಸ್ ಇಲಾಖೆ ಬಿಗಿ ಬಂದ ಬಿಗಿ ಭದ್ರತೆ ಮಾಡಿದ್ದಾರೆ.

Previous articleಕುಖ್ಯಾತ ಆರೋಪಿಗಳ ಬಂಧನ: ಪಿಸ್ತೂಲ್, ರಿವಾಲ್ವರ್ ವಶ
Next articleಚಿಕ್ಕಮಗಳೂರು ಜಿಲ್ಲೆಯ 6 ತಾಲ್ಲೂಕಿನ ಶಾಲಾ– ಕಾಲೇಜುಗಳಿಗೆ ರಜೆ