ಕ್ರಿಮಿನಾಶಕದಿಂದ ವ್ಯಕ್ತಿ ಸಾವು

0
10

ಕೊಪ್ಪಳ(ಕುಷ್ಟಗಿ): ಹತ್ತಿ ಹೊಲಕ್ಕೆ ಕ್ರಿಮಿನಾಶಕ ಸಿಂಪಡಿಸುವ ವೇಳೆ ಗಾಳಿ ಜೊತೆ ಬಾಯಿ ಸೇರಿದ ಔಷಧಿಯಿಂದ ತೀವ್ರ ಅಸ್ತವ್ಯಸ್ತಗೊಂಡ ವ್ಯಕ್ತಿ ಮೃತಪಟ್ಟಿದ್ದಾರೆ.
ತಾಲೂಕಿನ ತಳವಗೇರಾ ಗ್ರಾಮದ ಶ್ರೀಶೈಲ್ ಶರಣಪ್ಪ ಪಟೇದ್(೩೫) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಹೊಲದಲ್ಲಿ ಹತ್ತಿ ಬೆಳೆದಿದ್ದು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕ್ರಿಮಿನಾಶಕ ಸಿಂಪಡಿಸುವ ಸಂದರ್ಭದಲ್ಲಿ ಬಿರುಗಾಳಿ ಬೀಸಿದ್ದು, ಕ್ರಿಮಿನಾಶಕ ಔಷಧ ಬಾಯಿಗೆ ಸೇರಿಕೊಂಡಿದೆ. ತಕ್ಷಣ ಸ್ಥಳೀಯರು ಗಮನಿಸಿ ವ್ಯಕ್ತಿಯನ್ನು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Previous articleಯಡೂರು ವೀರಭದ್ರ ದೇವಸ್ಥಾನ ಜಲಾವೃತ
Next articleಮಳೆಗಾಲದಲ್ಲಿ ಎಲ್‌ಟಿ ಕಂಬ ಯಮದೂತ