ಕಲುಷಿತ ನೀರು ಕುಡಿದು ಸಾವು: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ

0
33
Mudenur

ಬೆಳಗಾವಿ: ಮುದೇನೂರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವೃದ್ಧನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರಿಗೆ ಹತ್ತು ಲಕ್ಷ ಪರಿಹಾರ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಮಾಹಿತಿ ನೀಡಿದ್ದಾರೆ.
ಮುದೇನೂರ ಗ್ರಾಮದಲ್ಲಿ ಆರ್​ಓ ಪ್ಲಾಂಟ್ ಇದೆ. ಜನರು ಆರ್​ಓ ಪ್ಲಾಂಟ್ ನೀರನ್ನೇ ಕುಡಿಯಬೇಕು. ಸಿಎಂ ಜೊತೆ ಮಾತನಾಡಿ ಮೃತ ಶಿವಪ್ಪ ಕುಟುಂಬಕ್ಕೆ 10 ಲಕ್ಷ ಪರಿಹಾರ ಕೇಳಿದ್ದೇನೆ. ಅದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಇನ್ಮುಂದಾದರು ಜನ ಶುದ್ಧವಾದ ನೀರು ಕುಡಿಯಬೇಕು. ನಲ್ಲಿಗಳ ಮೂಲಕ ಶುದ್ದವಾದ ನೀರು ಕೊಡುವ ಪ್ರಯತ್ನ ಮಾಡುತ್ತೇವೆ. ಯಾವುದೇ ಕಾರಣಕ್ಕೆ ಮುದೇನೂರು ಜನರು ಪೈಪ್​ಲೈನ್ ಮತ್ತು ಬೋರವೆಲ್​ಗಳಿಂದ ಬರುವ ನೀರನ್ನು ಕುಡಿಯಬಾರದು ಎಂದು ಸಚಿವ ಕಾರಜೋಳ ಮನವಿ ಮಾಡಿದ್ದಾರೆ.

Previous articleರಾಜ್ಯಮಟ್ಟದ ಕಿತ್ತೂರು ಉತ್ಸವ ಸುವರ್ಣಾಕ್ಷರದಲ್ಲಿ ಬರೆದಿಡುವಂತಾಗಲಿ: ದೊಡ್ಡಗೌಡ್ರ
Next articleಕೊಡಗಿನಲ್ಲೂ ಆಫ್ರಿಕನ್‌ ಹಂದಿ ಜ್ವರ ಪತ್ತೆ