ಜ್ವರ ಒಂದೇ ಮನೆಯ ಇಬ್ಬರು ಮಕ್ಕಳು ಸಾವು

0
19
ಮಂಗಳೂರು

ಮಂಗಳೂರು: ಬೆಳ್ತಂಗಡಿ ಮದ್ದಡ್ಕ ಗ್ರಾಮದ ಲಾಡಿ ಎಂಬಲ್ಲಿ ಒಂದೇ ಮನೆಯ ಇಬ್ಬರು ಮಕ್ಕಳು ಜ್ವರದಿಂದಾಗಿ ಮೃತಪಟ್ಟ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ಅಬ್ಬಾಸ್ ಎಂಬವರ ಮಕ್ಕಳಾದ ಸಫಾನ್ (8) ಹಾಗೂ ಸಿನಾನ್ (4) ಮೃತರು.
ಮಕ್ಕಳಿಗೆ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯವಾಗಿ ಚಿಕಿತ್ಸೆ ಪಡೆದು ಮಕ್ಕಳು ಮನೆಯಲ್ಲಿಯೇ ಇದ್ದರು. ಈ ನಡುವೆ ಇಬ್ಬರು ಮಕ್ಕಳಿಗೂ ಜ್ವರ ತೀವ್ರವಾಗಿದ್ದು ಬಳಿಕ ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಒಬ್ಬ ಬಾಲಕ ನಿನ್ನೆ ರಾತ್ರಿಯ ಸುಮಾರಿಗೆ ಮೃತಪಟ್ಟಿದ್ದು ಇನ್ನೊಬ್ಬ ಬಾಲಕ ಇಂದು ಮೃತಪಟ್ಟಿದ್ದಾನೆ. ಮನೆಯ ಇಬ್ಬರು ಮಕ್ಕಳನ್ನೂ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Previous articleಅರುಣಾಚಲ ಪ್ರದೇಶದ ಅತ್ಯಂತ ಹಳೆಯ ಮಾರುಕಟ್ಟೆಯಲ್ಲಿ ಅಗ್ನಿ ದುರಂತ: ಸುಮಾರು 700 ಅಂಗಡಿಗಳು ಬೂದಿ.
Next articleತಮಿಳು ಚಿತ್ರ ನಿರ್ಮಾಪಕರಾಗಿ ಧೋನಿ