ಕೆಮ್ಲಿನ್ ಕಂಪಾಸ್‌ ಬಾಕ್ಸ್ ಸಂಸ್ಥಾಪಕ ಸುಭಾಷ್ ದಾಂಡೇಕರ್ ನಿಧನ

0
25

ಜಾಮೆಟ್ರಿ ಬಾಕ್ಸ್ ಸ್ಥಾಪಕ ಸುಭಾಷ್ ದಾಂಡೇಕರ್ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಸುಭಾಷ್ ದಾಂಡೇಕರ್ ಅವರಿಗೆ ಆಶಿಶ್ ಮತ್ತು ಅನಘಾ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಭಾಷ್ ದಾಂಡೇಕರ್ ಅವರಿಗೆ 86 ವರ್ಷ ವಯಸ್ಸು ಆಗಿತ್ತು. ದಾಂಡೇಕರ್ ಅವರ ಅಂತ್ಯಕ್ರಿಯೆಯನ್ನು ಮುಂಬೈಯಲ್ಲಿ ನಡೆಸಲಾಗುವುದು ಎಂದು ಮೂಲಗಳು ತಿಳಿಸಿದ್ದು, ಗುರುವಾರ ಸಂತಾಪ ಸಭೆ ಹಮ್ಮಿಕೊಂಡಿದ್ದಾರೆ, 90ರ ದಶಕದಲ್ಲಿ ಕ್ಯಾಮ್ಲಿನ್ ಪೆನ್ಸಿಲ್, ಪೆನ್, ಕಂಪಾಸ್ ಸೇರಿದಂತೆ ಜಾಮಿಟ್ರಿ ಬಾಕ್ಸ್ ಹೆಚ್ಚಿನ ಜನಪ್ರಿಯತೆ ಗಳಿಸಿತ್ತು. ಎರಡು-ಮೂರು ದಶಕಗಳಿಂದ ಕ್ಯಾಮ್ಲಿನ್ ಕಂಪಾಸ್ ಮತ್ತು ಪೆನ್, ಪೆನ್ಸಿಲ್ ಬ್ರಾಂಡ್ ಶಾಲಾ ಮಕ್ಕಳಲ್ಲಿ ಜನಪ್ರಿಯ ವಸ್ತುವಾಗಿ ಉಳಿದಿತ್ತು.

Previous articleಬಸ್ ಪಲ್ಟಿ; 30 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯ
Next articleಬಂಗಾರದ ಅಂಗಡಿಯಲ್ಲಿ ಕಳ್ಳತನ: ಅಪಾರ ಪ್ರಮಾಣದ ಆಭರಣ ದೋಚಿದ ಕಳ್ಳರು