ಕುಮ್ಕಿ ಭೂಮಿಗೆ ಕೈ ಹಾಕಿದರೆ…. ದಿಟ್ಟ ಉತ್ತರ ನೀಡಲು ಬದ್ಧ

0
17

ಬೆಂಗಳೂರು: ಕುಮ್ಕಿ ಭೂಮಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಕೈ ಹಾಕಲು ಬಂದರೆ ದಿಟ್ಟ ಉತ್ತರ ನೀಡಲು ಬದ್ಧ ಎಂದು ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮ್ಕಿ ಭೂಮಿ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕರಾವಳಿಯ ರೈತಬಂಧುಗಳ ಕುಮ್ಕಿ ಭೂಮಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಕೈ ಹಾಕಲು ಬಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಭಾಂದವರ ಜೊತೆಯಲ್ಲಿ ಭಾಜಪಾ ಹೋರಾಟ ನಡೆಸಲಿದೆ. ಕುಮ್ಕಿಹಕ್ಕಿನ ವಿಷಯದಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದು ಎಂದು ಹೈಕೋರ್ಟಿನ ಆದೇಶ ಇದ್ದರೂ ರೈತರ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿರುವ ರಾಜ್ಯದ ಕಾಂಗ್ರೆಸ್ ಸರಕಾರ ಕುಮ್ಕಿಭೂಮಿಯನ್ನು ಗುತ್ತಿಗೆ ನೀಡಲು ಚಿಂತನೆ ನಡೆಸಿರುವುದು ಖಂಡನೀಯ. ಇದಕ್ಕೆ ಮುಂದಿನ ದಿನಗಳಲ್ಲಿ ರೈತರ ಪರ ದಿಟ್ಟ ಉತ್ತರ ನೀಡಲು ಬದ್ಧ ಎಂದಿದ್ದಾರೆ.

Previous articleಶೆಡ್ಡಿಗೆ ಬೆಂಕಿ: ತಾಯಿ-ಮಗಳು ಸಜೀವ ದಹನ
Next articleತುಮಕೂರು: 350 ಕೋಟಿ ರೂ. ವೆಚ್ಚದಲ್ಲಿ 5 ಮೇಲ್ಸೇತುವೆ