ಹುಬ್ಬಳ್ಳಿ : ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ವಿಶ್ವ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಮಿಸ್ ಯೂನಿವರ್ಸಲ್ ಎಟೈಟ್ – 2024 ಕಿರೀಟ ಮುಡಿಗೇರಿಸಿಕೊಂಡ ಹುಬ್ಬಳ್ಳಿಯ ಬೆಡಗಿ ಡಾ.ಶ್ರುತಿ ಹೆಗಡೆ ಅವರಿಗೆ ರವಿವಾರ ಹುಬ್ಬಳ್ಳಿಯಲ್ಲಿ ಭವ್ಯ ಸ್ವಾಗತವನ್ನು ಅಭಿಮಾನಿಗಳು, ಬಂಧುಗಳು, ಸೌಂದರ್ಯ ಪ್ರಿಯರು ಹೂ ಮಳೆ ಗರೆದು ಸ್ವಾಗತಿಸಿದರು.
ಲಿಂಗರಾಜನಗರದ ಸಾಂಸ್ಕೃತಿಕ ಸಮುದಾಯಭವನದಲ್ಲಿ ನಡೆದ ಅಭಿನಂದನಾ ಸಮಾರಂಭಕ್ಕೂ ಮುನ್ನ ಡಾ.ಶ್ರುತಿ ಹೆಗಡೆ ಅವರು ಭಾರತ ಮಾತೆ ಬಾವುಟದೊಂದಿಗೆ ರ್ಯಾಂಪ್ ವಾಕ್ ನಡೆಸಿ ಗಮನ ಸೆಳೆದರು.
ಬಳಿಕ ವಿವಿಧ ಭಂಗಿಗಳಲ್ಲಿ ನಡೆಸಿದ ರ್ಯಾಂಪ್ ವಾಕ್ ಗೆ ಅಭಿಮಾನಿಗಳು ಚಪ್ಪಾಳೆ ಸುರಿಮಳೆಗೈದರು.