ಧಾರವಾಡ: ಅತ್ಯಂತ ಕುತೂಹಲ ಮೂಡಿಸಿದ್ದ ಧಾರವಾಡ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಮೂರನೇ ಬಾರಿ ಬಿಜೆಪಿ ಬೆಂಬಲಿತ ನಿರ್ದೇಶಕ ಶಂಕರ ಮುಗದ ಅಧ್ಯಕ್ಷರಾಗಿ ಆಯ್ಕೆಯಾದರು.
ಮುಂಜಾನೆಯಿಂದ ಶಾಂತಿಯುತವಾಗಿ ಚುನಾವಣೆ ಪ್ರಕ್ರಿಯೇ ನಡೆಯಿತು. ಒಟ್ಟು ೧೪ ಜನ ಮತದಾನದ ಹಕ್ಕು ಹೊಂದಿದ್ದು, ಅದರಲ್ಲಿ ಬಿಜೆಪಿಯ ಶಂಕರ ಮುಗದ ೮ ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಶಿವಲೀಲಾ ಕುಲಕರ್ಣಿ ೬ ಮತಗಳನ್ನು ಪಡೆದು ಪರಾಭವಗೊಂಡರು.
ಚುನಾವಣೆಗೂ ಮುನ್ನ ಬಿಜೆಪಿ ಬೆಂಬಲಿತ ಗೀತಾ ಮರಲಿಂಗಣ್ಣವರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಮಧ್ಯಾಹ್ನ ಗೀತಾ ಅವರು ನಾಮಪತ್ರ ವಾಪಸ್ ಪಡೆದರು. ಅದೇ ರೀತಿ ಉಪಾಧ್ಯಕ್ಷರಾಗಿ ಸುರೇಶ್ಚಂದ್ರ ಹೆಗಡೆ ಆಯ್ಕೆಯಾದರು.