ಧಾರವಾಡ: ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಯ ಧಾರವಾಡ ಮನೆಗಳ ಮೇಲೆ ಲೋಕಾಯುಕ್ತರು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ.
ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಎಂಬುವವರಿಗೆ ಸಂಬಂಧಿಸಿದ ಸಪ್ತಾಪುರ ಹಾಗೂ ರಾಧಾಕೃಷ್ಣ ನಗರದಲ್ಲಿಯ ಎರಡು ಪಿಜಿಗಳ ಮೇಲೆ ದಾಳಿ ನಡೆಸಲಾಗಿದೆ.
ಅಲ್ಲದೇ ಅಳ್ನಾವರ ರಸ್ತೆಯಲ್ಲಿಯ ವರವನಾಗಲಾವಿ ಬಳಿ ೬ ಎಕರೆ ಫಾರ್ಮ ಹೌಸ್ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ.ಅಪಾರ ಪ್ರಮಾಣದ ವಸ್ತುಗಳನ್ನು ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.