ಡೆಂಗ್ಯೂ: ಮೆಡಿಕಲ್ ಎಮರ್ಜೆನ್ಸಿ ಘೋಷಿಸುವಂತೆ ಶೆಟ್ಟರ್ ಆಗ್ರಹ

0
19

ಬೆಳಗಾವಿ : ಡೆಂಗ್ಯೂ ಕೇಸ್​ಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸುವಂತೆ ಸಂಸದ ಜಗದೀಶ್ ಶೆಟ್ಟರ್ ಆಹ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಭೇಟಿ ಬಳಿಕ ಮಾತನಾಡಿರುವ ಅವರು ಇಂದು ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದಾಗ 189 ಡೆಂಗ್ಯೂ ಬಾಧಿತರು ಅಡ್ಮಿಟ್ ಆಗಿದ್ದಾರೆ, ಇನ್ನು ಜಿಲ್ಲಾದ್ಯಂತ 177 ಕೇಸ್ ಬಂದಿವೆ ಎಂದು ಡಿಹೆಚ್ಒ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಡೆಂಗ್ಯೂ ಕೇಸ್​ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮೆಡಿಕಲ್ ಎಮರ್ಜೆನ್ಸಿ ಘೋಷಿಸುವ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಂದಿದ್ದಾರೆ. ಆದರೆ ಇದೆ ರೀತಿ ನಿರ್ಲಕ್ಷ್ಯ ವಹಿಸಿದರೆ ಮುಂದೆ ಯಾವುದೇ ಸಂದರ್ಭದಲ್ಲಿ ಅಂಥ ಸ್ಥಿತಿ ಬರಬಹುದು. ಆದ್ದರಿಂದ ಮೆಡಿಕಲ್ ಎಮರ್ಜೆನ್ಸಿ ಘೋಷಿಸುವಂತೆ ಆಗ್ರಹಿಸುತ್ತೆನೆ ಎಂದರು.

Previous articleಅಣ್ಣಪ್ಪ ಸ್ವಾಮಿಯ ಗುಡಿಯಲ್ಲಿ ಯುವಕನ ಹುಚ್ಚಾಟ
Next articleನಾಳೆ ಎಸ್​ಎಸ್​ಎಲ್​ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ