ಕುಷ್ಟಗಿ: ತಾಲೂಕಿನ ವಣಗೇರಿಯಲ್ಲಿ ಜ. ೮ರಂದು ಬೆಳಗಿನ ಜಾವ ರವಿಕುಮಾರ ಭಜಂತ್ರಿ ಅವರಿಗೆ ಸೇರಿದ ಹಂದಿ ಶೆಡ್ಡಿನಲ್ಲಿ ಮಲಗಿರುವ ಇಬ್ಬರನ್ನು ಕೈ ಕಾಲು ಕಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ ಅವರ ಬಳಿ ಇದ್ದ ಹಣ ಮೊಬೈಲ್ ಹಾಗೂ 30 ಹಂದಿಗಳನ್ನು ಕಳ್ಳತನ ಮಾಡಿದ ಇಬ್ಬರನ್ನು ಬಂಧಿಸುವಲ್ಲಿ ಕುಷ್ಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಕನೂರ ಗ್ರಾಮದ ಯಮನೂರ ದುರಗಪ್ಪ ಕುಶಾಲನಗರ(34) ಹಾಗೂ ಗಜೇಂದ್ರಗಡದ ಕುಮಾರ ಶೇಖಪ್ಪ ರಾಠೋಡ(29) ಬಂಧಿತ ಆರೋಪಿಗಳಾಗಿದ್ದಾರೆ.