ಹುಬ್ಬಳ್ಳಿ: ಯುವಕರ ಗುಂಪೊಂದು ಹಣವನ್ನು ತೂರಿ ಕುಣಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಳೇ ಹುಬ್ಬಳ್ಳಿ ಭಾಗದ ಯುವಕರದ್ದು ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ರೀಲ್ಸ್ ಗೋಸ್ಕರ ಯುವಕರು ಹಣ ತೂರಿದ್ದಾರೆ ಎನ್ನಲಾಗಿದೆ. ಸ್ನೇಹಿತನೊಬ್ಬನ ಬರ್ತಡೇ ಪಾರ್ಟಿಯಲ್ಲಿ ಕುಣಿಯುವಾಗ ಯುವಕನೋರ್ವ ಕಂತೆ ಕಂತೆ ನೋಟುಗಳನ್ನು ತೂರಿದ್ದಾನೆ ಎನ್ನಲಾಗಿದೆ.
ಆದರೆ, ಈ ವಿಡಿಯೋ ರೀಲ್ಸ್‌ಗಾಗಿ ಮಾಡಿದ್ದು ಎನ್ನಲಾಗಿದೆ.