ನೀವು ಹೂಗಳಿಗಿಂತ ಮುಳ್ಳುಗಳನ್ನೇ ಬಹಳ ಬೆಳೆಸಿದ್ದೀರಿ…

0
14

ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆಗೆ ದಿಕ್ಕೇ ಇಲ್ಲದಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಬೋಳಿಯಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚೂರಿ ಇರಿತ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕರ್ನಾಟಕವನ್ನು ಅಕ್ಷರಶಃ ನರಕ ಮಾಡಿದೆ ರಾಜ್ಯ ಕಾಂಗ್ರೆಸ್ ಪಕ್ಷದ ಅಸಮರ್ಥ ಆಡಳಿತ. ರಾಜ್ಯದ ಕಾನೂನು ಸುವ್ಯವಸ್ಥೆಗೆ ದಿಕ್ಕೇ ಇಲ್ಲದಂತಾಗಿದೆ. ನಿನ್ನೆ ಶ್ರೀ ನರೇಂದ್ರ ಮೋದಿಯವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಇಬ್ಬರು ಕಾರ್ಯಕರ್ತರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ.
ಮಾನ್ಯ ಸಿದ್ದರಾಮಯ್ಯನವರೇ… ನಿಮ್ಮ ಸ್ವಯಂ ಘೋಷಿತ ಸರ್ವಜನಾಂಗದ ಶಾಂತಿಯ ತೋಟದಲ್ಲಿ ನೀವು ಹೂಗಳಿಗಿಂತ ಮುಳ್ಳುಗಳನ್ನೇ ಬಹಳ ಬೆಳೆಸಿದ್ದೀರಿ. ನಿಮ್ಮ ಆಡಳಿತದಲ್ಲಿ ಜನಸಾಮಾನ್ಯರು ಆತಂಕದಲ್ಲಿ ಇದ್ದಾರೆ.

Previous articleಮೂರನೇ ಅವಧಿಯ ಮೊದಲ ದಿನ: ಅನ್ನದಾತರಿಗೆ ಕಿಸಾನ್ ಸಮ್ಮಾನ
Next article13 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಪ್ರಕಟ