Home Advertisement
Home ಅಪರಾಧ ಸಲಿಂಗ ಪ್ರೀತಿ: ಸ್ನೇಹಿತೆಗೆ ಬ್ಲೇಡ್‌ನಿಂದ ಹಲ್ಲೆ

ಸಲಿಂಗ ಪ್ರೀತಿ: ಸ್ನೇಹಿತೆಗೆ ಬ್ಲೇಡ್‌ನಿಂದ ಹಲ್ಲೆ

0
106
ಹಲ್ಲೆ

ದಾವಣಗೆರೆ: ಯುವತಿಯರಿಬ್ಬರ ನಡುವಿನ ಜಗಳ ತಾರಕಕ್ಕೇರಿ ಸ್ನೇಹಿತೆಗೆ ಯುವತಿಯೊಬ್ಬಳು ಬ್ಲೇಡ್‌ನಿಂದ ಕೊಯ್ದು ಹಲ್ಲೆ ನಡೆಸಿದ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ಘಟನೆಗೆ ಸಲಿಂಗಕಾಮವೇ ಕಾರಣವೆಂದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ಬಹಿರಂಗಗೊಂಡಿದೆ.
ಲಾಸ್ಯ ಎಂಬಾಕೆ ಸ್ನೇಹಳಿಗೆ ಬ್ಲೇಡ್‌ನಿಂದ ಹಲ್ಲೆ‌ ನಡೆಸಿದ್ದಳು. ಶುಕ್ರವಾರ ಆಕೆಯನ್ನು ಬಂಧನಕ್ಕೊಳಪಡಿಸಲಾಗಿದೆ. ಲಾಸ್ಯ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರುನವಳಾಗಿದ್ದು, ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದಳು. ಸ್ನೇಹಾಗೆ ಮತ್ತೋರ್ವ ಯುವತಿಯ ಜತೆ ಗಾಢವಾದ ಸ್ನೇಹವಿರುವುದನ್ನು ಕಂಡು ಸಹಿಸದೆ ಲಾಸ್ಯ ಆಕೆಯ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಳು ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.
ಸ್ನೇಹ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಅಂತಿಮ ವರ್ಷದ ಬಿಎ ಪರೀಕ್ಷೆ ನಡೆಯುತ್ತಿರುವುದರಿಂದ ಆಕೆಗೆ ವೈದ್ಯರ ಸಲಹೆಯ ಮೇರೆಗೆ ಪರೀಕ್ಷೆ ಬರೆಯಲು ಅನುವು ಮಾಡಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

Previous articleಪಿಯು ಪರೀಕ್ಷೆ: ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
Next articleರೈಲು ತಪ್ಪಿದರೂ ಪ್ರಾಣ ಉಳಿಸಿದ ಉಪನ್ಯಾಸಕಿ