ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

0
19
NIA

ನವದೆಹಲಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿದ್ದು, ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಮುಂಬೈ ವಿಮಾನ ನಿಲ್ದಾಣದಿಂದ ಆತನನ್ನು ಎನ್‌ಐಎ ಬಂಧಿಸಿದೆ.
ರಿಯಾಜ್ ಯೂಸುಫ್ ಹಾರಳ್ಳಿ ಅಲಿಯಾಸ್‌ ರಿಯಾಜ್‌ನ ಬಂಧನದಿಂದ ನೆಟ್ಟಾರು ಭೀಕರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇದುವರೆಗೆ ಬಂಧಿತ ಆರೋಪಿಗಳ ಸಂಖ್ಯೆ 19 ಕ್ಕೆ ಏರಿದೆ. ತಲೆಮರೆಸಿಕೊಂಡಿದ್ದ ಮುಸ್ತಫಾ ಪೈಚಾರ್, ಹಾಗೂ ಆತನ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಮನ್ಸೂರ್ ಪಾಷಾ ಎಂಬಾತನನ್ನು ಬಂಧಿಸಿದ ಒಂದು ತಿಂಗಳೊಳಗೆ ಈತನ ಬಂಧನವಾಗಿದೆ.

Previous articleರಾಹುಲ್‌ನನ್ನು ಜನ ಒಪ್ಪಿಕೊಂಡಿದ್ದಾರೆ
Next articleಕೇಂದ್ರ ಸಚಿವ ಸಂಪುಟ ಸಭೆಗಾಗಿ ಪ್ರಲ್ಹಾದ ಜೋಶಿ ದೆಹಲಿಗೆ ಪ್ರಯಾಣ